ಆಟವಾಡುತ್ತಾ ಬಾವಿಗೆ ಬಿದ್ದ ಕಂದಮ್ಮಗಳು ದಾರುಣವಾಗಿ ಸಾವು

X
TV5 Kannada24 May 2018 12:11 PM GMT
ಬೆಳಗಾವಿ : ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ, ಆಟವಾಡುತ್ತಿದ್ದ ವೇಳೆ ಬಾವಿಗೆ ಬಿದ್ದ ಮಕ್ಕಳಿಬ್ಬರು ನೀರುಪಾಲಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ದಾರುಣವಾಗಿ ಸಾವನ್ನಪ್ಪಿದ ಮಕ್ಕಳನ್ನು ಆದರ್ಶ ಸುಭಾಷ್ ತಳವಾರ, ಮತ್ತು ಅಭಿಶೇಕ್ ಬಸವರಾಜ್ ಮಡಿವಾಳ ಎಂದು ಗುರುತಿಸಲಾಗಿದೆ. ಈ ಮಕ್ಕಳು ಪೋಷಕರೊಡನೆ ಗದ್ದೆಗೆ ತೆರಳಿ, ಆಟವಾಡುತ್ತಿದ್ದವು. ಕೊಕಟನೂರು ಗ್ರಾಮದ ರಬಕವಿ ತೋಟದಲ್ಲಿ ಆಡುತ್ತಾ ಆಡುತ್ತಾ ಬಾವಿಗೆ ಬಿದ್ದಿದ್ದಾವೆ. ಈಜುಬಾರದ ಹಿನ್ನಲೆಯಲ್ಲಿ ಬಾವಿಗೆ ಬಿದ್ದ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬಾವಿಗೆ ಇಳಿದು, ಅಭಿಷೇಕ್ ಶವವನ್ನು ಹೊರ ತೆಗೆದರು. ಆದರ್ಶನ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ. ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story