Top

ಗೋಲಿಬಾರ್ ಪೂರ್ವ ನಿಯೋಜಿತವಲ್ಲ : ಸಿಎಂ ಪಳನಿ ಸ್ವಾಮಿ

ಗೋಲಿಬಾರ್ ಪೂರ್ವ ನಿಯೋಜಿತವಲ್ಲ : ಸಿಎಂ ಪಳನಿ ಸ್ವಾಮಿ
X

ಚೆನ್ನೈ : ಕಳೆದ ನಿನ್ನೆ ನಡೆದ ತೂತುಕುಡಿಯ ಅಣ್ಣಾನಗರದಲ್ಲಿ ಸ್ಟೆರ್ಲೈಟ್ ಕಂಪನಿಯ ವಿರುದ್ಧ ನಡೆಸಲಾದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಆತ್ಮರಕ್ಷಣೆಗಾಗಿಯೇ ಹೊರತು, ಪೂರ್ವನಿಯೋಜಿತವಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿಯವರು ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವ್ಯಕ್ತಿಯೊಬ್ಬ ದಾಳಿ ನಡೆಸಿದಾಗ, ಆತ್ಮರಕ್ಷಣೆಗಾಗಿ ಹೋರಾಡುವುದು ಸಾಮಾನ್ಯ. ಪೊಲೀಸರೂ ಕೂಡ ಅದನ್ನೇ ಮಾಡಿದ್ದಾರೆ. ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದಾರೆಯೇ ವಿನಃ ಪೂರ್ವ ನಿಯೋಜಿತವಾಗಿ ಗುಂಡಿನ ದಾಳಿ ನಡೆಸಿಲ್ಲ, ಎಂದು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Next Story

RELATED STORIES