ಸರಣಿ ಅಪಘಾತ, ಹತ್ತು ಜನ ಪ್ರಣಾಪಾಯದಿಂದ ಪಾರು

ಮಂಡ್ಯ : ಜಿಲ್ಲೆಯ ರಾಗಿ ಮುದ್ದನಹಳ್ಳಿ ಗೇಟ್ ಬಳಿ, ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರೊಂದು, ಡಿವೈಡರ್ಗೆ ಡಿಕ್ಕಿ ಹೊಡೆದು, ಮೈಸೂರು ಕಡೆಯಿಂದ ಬರುತ್ತಾ ಇದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡಿದಿದೆ. ಇದರಿಂದಾಗಿ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಕೂಡ ಡಿಕ್ಕಿ ಹೊಡೆದಿದೆ.
ಆದರೇ ಈ ಸರಣಿ ಅಪಘಾತದಲ್ಲಿ, ಪವಾಡಸಾದೃಶ್ಯ ರೀತಿಯಲ್ಲಿ, ಹತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಅಂದಹಾಗೇ, ಸರಣಿ ಅಪಘಾತದಲ್ಲಿ, ಬೈಕ್ ಸೇರಿದಂತೆ ಎರಡು ಕಾರುಗಳು ಸಂಪೂರ್ಣ ಜಖಂ ಆಗಿದ್ದಾವೆ. ಅಪಘಾತದಿಂದ ರಸ್ತೆಯಲ್ಲಿ ಜಾಮ್ ಉಂಟಾದ ಪರಿಣಾಮ, ಕಿಲೋಮೀಟರ್ ಗಟ್ಟಲೇ ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕುವಂತಾಯಿತು. ಅಲ್ಲದೇ ಇದೇ ಮಾರ್ಗವಾಗಿ ಆಗಮಿಸುತ್ತಿದ್ದ ಆ್ಯಂಬುಲೆನ್ಸ್ ಕೂಡ ದಾರಿ ಕಾಣದೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕುವಂತಾಯಿತು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.