Top

ರೆಸಾರ್ಟ್ ವಾಸ್ತವ್ಯಕ್ಕೆ ತಗುಲಿದ ಖರ್ಚೆಷ್ಟು ಗೊತ್ತಾ..?

ರೆಸಾರ್ಟ್ ವಾಸ್ತವ್ಯಕ್ಕೆ ತಗುಲಿದ ಖರ್ಚೆಷ್ಟು ಗೊತ್ತಾ..?
X

ಬೆಂಗಳೂರು : 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು ಹಲವು ಗೊಂದಲಗಳಿಗೆ ತೆರೆಬಿದ್ದು, ಸದ್ಯ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಆದರೆ ಇದಕ್ಕೂ ಮುನ್ನ ತಮ್ಮ ಶಾಸಕರ ಮನವೊಲಿಸಿ ಎಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಿಬಿಡತ್ತೋ ಎಂಬ ಭಯದಿಂದ, ಜೆಡಿಎಸ್-ಕಾಂಗ್ರೆಸ್ ವರಿಷ್ಠರು ತಮ್ಮ ಪಕ್ಷದ ಶಾಸಕರನ್ನ ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದರು.

ಶಾಸಕರ ರೆಸಾರ್ಟ್ ವಾಸ್ತವ್ಯ ಇಂದಿಗೆ ಅಂತ್ಯಗೊಂಡಿದ್ದು, ವಾಸ್ತವ್ಯಕ್ಕೆ ತಗುಲಿದ ಖರ್ಚು ಎಷ್ಟು ಎಂದು ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. 8 ದಿನದ ಖರ್ಚು ಬರೋಬ್ಬರಿ 4ಕೋಟಿ 90 ಲಕ್ಷವಾಗಿದೆ. 8 ದಿನಗಳಲ್ಲಿ ಮೂರು ರೆಸಾರ್ಟ್ ಗಳಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದು, ಎರಡು ದಿನ ಈಗಲ್ಟನ್ ರೆಸಾರ್ಟ್, ಒಂದು ದಿನ ಹೈದ್ರಾಬಾದ್ ನ ತಾಜ್ ಕೃಷ್ಣ, 5 ದಿನ ಹಿಲ್ಟನ್ ಹೋಟೇಲ್ ನಲ್ಲಿ ವಾಸ್ತವ್ಯ ಹೂಡಲಾಗಿತ್ತು.ಓರ್ವ ಶಾಸಕನಿಗೆ ಅಂದಾಜು 7 ಲಕ್ಷದಷ್ಟು ಖರ್ಚಾಗಿದ್ದು, ಒಟ್ಟು 4ಕೋಟಿ 90 ಲಕ್ಷ ರೂಪಾಯಿ ಖರ್ಚಾಗಿದೆ.ಶಾಸಕರಿಗಾಗಿ ಕೋಟಿ ಕೋಟಿ ಹಣ ಪೋಲು ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

Next Story

RELATED STORIES