Top

ರಾಜಸ್ಥಾನ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಗೆಲುವು

ರಾಜಸ್ಥಾನ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಗೆಲುವು
X

ಕೋಲ್ಕತಾ: ಆಂಡ್ರೆ ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 25 ರನ್‍ಗಳ ಗೆಲುವು ಪಡೆಯಿತು. ಎರಡನೇ ಕ್ವಾಲಿಫೈಯರ್‍ನಲ್ಲಿ ನಾಳೆ ಸನ್‍ರೈಸರ್ಸ್ ತಂಡವನ್ನ ಎದುರಿಸಲಿದೆ. ಈಡನ್ ಗಾರ್ಡನ್‍ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನಿಗದಿತ ಓವರ್‍ನಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ತಂಡದ ನಾಯಕ ದಿನೇಶ್ ಕಾರ್ತಿಕ್ (52), ಶುಭಮಾನ್ ಗಿಲ್ (28), ಆಲ್‍ರೌಂಡರ್ ಆಂಡ್ರೆ ರಸೆಲ್ (49) ರನ್ ಗಳಿಸಿದ್ರು. ಸವಾಲಿನ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‍ಮನ್‍ಗಳು ರನ್ ಗಳಿಸಲು ಪರದಾಡಿದ್ರು. ಅಜಿಂಕ್ಯ ರಹಾನೆ (46), ಸಂಜು ಸಾಮ್ಸನ್ (50) ಬಿಟ್ಟರೆ ತಂಡದ ಯಾವ ಬ್ಯಾಟ್ಸ್‍ಮನ್‍ಗಳು ಚೆನ್ನಾಗಿ ಆಡಲಿಲ್ಲ. ಕೊನೆಗೆ ರಾಜಸ್ಥಾನ ರಾಯಲ್ಸ್ 20 ಓವರ್‍ಗಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Next Story

RELATED STORIES