Top

ಪ್ರೀತಿಸಿದ ಯುವಕನಿಂದ ಅವಮಾನ : ಯುವತಿ ಆತ್ಮಹತ್ಯೆ

ಪ್ರೀತಿಸಿದ ಯುವಕನಿಂದ ಅವಮಾನ : ಯುವತಿ ಆತ್ಮಹತ್ಯೆ
X

ಮೈಸೂರು : ಪ್ರೀತಿ ಮಾಯಾಬಾಜಾರು ಅಂತಾರೆ. ಈ ಮಾಯಾಬಾಜಾರಿನ ಪ್ರೀತಿ ಯಾವಾಗ ಹೇಗೆ ಹುಟ್ಟುತ್ತದೆ ಅಂತ ಹೇಳೋಕೆ ಆಗೋದಿಲ್ಲ. ಕುರುಡು ಪ್ರೀತಿಯ ಮುಂದೆ ಎಲ್ಲವೂ ನಗಣ್ಯ. ಯಾಕೆಂದರೇ, ಕೇವಲ ಪ್ರೀತಿಸಿದ ಯುವಕ ತನಗೆ ಅವಮಾನ ಮಾಡಿದ ಎಂಬ ಕಾರಣಕ್ಕೆ, ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣದಾ ಘಟನೆ ಮೈಸೂರಿನಲ್ಲಿ ನಡೆದಿರೋದೇ ಇದಕ್ಕೆ ಸಾಕ್ಷಿ..

ಮೈಸೂರಿನ ಮೇಟಗಳ್ಳಿಯ ನಿವಾಸಿ ಧನ್ಯಾಗೆ ಇನ್ನೂ 19 ವರ್ಷ. ಬದುಕಿ, ಬಾಳಿ ಸಾಧಿಸಬೇಕಾದ್ದೂ ಬೆಟ್ಟದಷ್ಟಿದ್ದರೂ, ಪ್ರೀತಿಯಲ್ಲಿ ಬಿದ್ದಿದ್ದ ಧನ್ಯಾಗೆ, ತಾನು ಪ್ರೀತಿಸಿದ ಯುವಕ ಬೈದ ಎಂಬ ಒಂದೇ ಒಂದು ಕಾರಣದಿಂದ ಇಂದು ಆತ್ಮಹತ್ಯೆಗೆ ಕೊರಳೊಡ್ಡಿದ್ದಾರೆ. ಈ ಮೂಲಕ ಧನ್ಯಾ ಬಾರದ ಲೋಕಕ್ಕೆ ತೆರಳಿದ್ದಾರೆ.

ಅಂದಹಾಗೇ ಧನ್ಯಾ, ಮೈಸೂರಿನ ಮೇಟಗಳ್ಳಿಯ ನಿವಾಸಿಯಾದ ದೀನು ಎಂಬ ಯುವಕನನ್ನು ಪ್ರೀತಿಸುತ್ತಾ ಇದ್ದಳು. ಪದೇ ಪದೇ ಯುವತಿ ಜೊತೆ ಜಗಳವಾಡುತ್ತಿದ್ದ ದೀನು. ಕೆಲವೊಂದು ವೇಳೆ ಯುವತಿ ತಂದೆ ತಾಯಿಗೂ ಅವಮಾನ ಮಾಡಿದ್ದನು. ಇದರಿಂದಾಗಿಯೇ ನನ್ನ ಸಾವಿಗೆ ದೀನು ಕಾರಣ, ಪದೇ ಪದೇ ತಂದೆ-ತಾಯಿಗಳನ್ನು ಅವಮಾನಿಸುತ್ತಿದ್ದನು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು, 19 ವರ್ಷದ ಧನ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ.

Next Story

RELATED STORIES