Top

ಸಿದ್ದಗಂಗಾ ಮಠಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ

ಸಿದ್ದಗಂಗಾ ಮಠಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ
X

ತುಮಕೂರು : ನೂತನ ಸಿಎಂ ಕುಮಾರಸ್ವಾಮಿ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು‌ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದ್ರು. ಮಧ್ಯಾಹ್ನ ೧ ಗಂಟೆಗೆ ಸರಿಯಾಗಿ ಮಠಕ್ಕೆ‌ಆಗಮಿಸಿದ ಸಿಎಂ ಎಚ್ಡಿಕೆ ಹಿರಿಯ ಶ್ರೀಗಳ ಕಚೇರಿಯಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದ್ರು. ಅಲ್ಲದೆ ತಾನು ೨೫ ನೇ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ನಿಮ್ಮ ಆಶೀರ್ವಾದ ಬೇಕುಬೆಂದು ಶ್ರೀಗಳ ಬಳಿ ಕೇಳಿಕೊಂಡರು.

ಶ್ರೀಗಳು ಕೂಡಾ ಸಿಎಂ ಕುಮಾರಸ್ವಾಮಿ ಅವರಿಗೆ ಶುಭವಾಗಲಿ ಎಂದು ಹಾರೈಸಿದ್ರು. ಬಳಿಕ ಕೆಲ ಕಿರಿಯ ಶ್ರೀ ಸಿದ್ದಲಿಂಗಸ್ವಾಮಿಗಳ ಜೊತೆ ಸಿಎಂ ಕುಮಾರಸ್ವಾಮಿ ಪ್ರತ್ಯೇಕ ಮಾತುಕತೆ ‌ನಡೆಸಿದ್ರು. ತದನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನು ಸಾಂದರ್ಭಿಕ ಶಿಶು‌‌ ಅಷ್ಟೆ, ಮುಖ್ಯಮಂತ್ರಿಯಾಗಿ ಅಟ್ಟಹಾಸ ಮೇರಿಬೇಕೆಂದು ಪದವಿ ಸ್ವೀಕಾರ ಮಾಡಿಲ್ಲ ಅಂದರು.

ರಾಜಕೀಯ ಸನ್ನಿವೇಶದಲ್ಲಿ ಅನಿವಾರ್ಯವಾಗಿ ಒಪ್ಪಿಕೊಂಡಿದ್ದೇನೆ. ಇದೇ ಹುದ್ದೆಯಲ್ಲಿ ಮುಂದುವರೆಯಬೇಕು ಅನ್ನೋ ಹುಚ್ಚು ಆಸೆಯೂ ನನಗಿಲ್ಲ ಎಂದು ಮನದ ಇಂಗಿತವನ್ನು ವ್ಯಕ್ತಪಡಿಸಿದ್ರು. ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ಕೊಡಬೇಕು ಅನ್ನೋದು ನನ್ನ ಹಂಬಲ. ಆದರೂ ಹೆಜ್ಜೆ ಹೆಜ್ಜೆಗೂ ತೊಂದರೆ ಕೊಡ್ತಾರೆ ಅನ್ನೋದು ನನಗೆ ಗೊತ್ತಿದೆ ‌ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಮುಖ್ಯಮಂತ್ರಿ ಗಾದಿಗಾಗಿ ನನ್ನ ಗುಣ, ನಡತೆಯಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು..

Next Story

RELATED STORIES