Top

ಕೊನೆಗೂ ಕಾಂಟ್ರ್ಯಾಕ್ಟ್ ಮುಗಿಸಿದ ರಾಧಿಕಾ ಕುಮಾರಸ್ವಾಮಿ​​​..!

ಕೊನೆಗೂ ಕಾಂಟ್ರ್ಯಾಕ್ಟ್ ಮುಗಿಸಿದ ರಾಧಿಕಾ ಕುಮಾರಸ್ವಾಮಿ​​​..!
X

ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ರಾಧಿಕಾ ಕುಮಾರಸ್ವಾಮಿಯವರನ್ನು ಸೋಷಿಯಲ್​ ಮೀಡಿಯದಲ್ಲಿ ಹುಡುಕುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ರಾಧಿಕಾ ಕುಮಾರಸ್ವಾಮಿಯವರ ಯಾವುದೇ ಹೊಸ ಸಿನಿಮಾಗಳ ಬಗ್ಗೆ ಸುದ್ದಿ ಸಮಾಚಾರಗಳು ಬಂದಿರಲಿಲ್ಲ. ಫೈನಲಿ ರಾಧಿಕಾ ತಮ್ಮ ಹೊಸ ಸಿನಿಮಾಗಳಿಂದ ಮತ್ತೆ ಸದ್ದು ಮಾಡೋಕೆ ಮುಂದಾಗಿದ್ದಾರೆ.

ಆ್ಯಕ್ಷನ್ ಕಿಂಗ್​ ಅರ್ಜುನ್ ಸರ್ಜಾ ಜೊತೆ ರಾಧಿಕಾ ಕುಮಾರಸ್ವಾಮಿ ನಟಿಸ್ತಿರೋ ಕಾಂಟ್ರ್ಯಾಕ್ಟ್​​ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರದ ಒಂದಷ್ಟು ಕಲರ್​​ಫುಲ್ ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಸ್ಟಿಲ್ಸ್​​ನಲ್ಲಿ ಅರ್ಜುನ್ ಸರ್ಜಾ ಜೊತೆ ರಾಧಿಕಾ ಕುಮಾರಸ್ವಾಮಿ ಮಿರಿ ಮಿರಿ ಮಿಂಚಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನಟನೆಯ ಕಾಂಟ್ರ್ಯಾಕ್ಟ್​​ ಸಿನಿಮಾ ಏಕಕಾಲದಲ್ಲಿ ಕನ್ನಡ , ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಅದ್ಧೂರಿ ಸಿನಿಮಾ. ಆ್ಯಕ್ಷನ್, ಥ್ರಿಲ್ಲರ್ ಮತ್ತು ಫ್ಯಾಮಿಲಿ ಎಂಟರ್​ಟೇನರ್ ಅಂಶಗಳನ್ನು ಹೊತ್ತು ಬರ್ತಿರೋ ಸಿನಿಮಾ ಇದು. ಟಾಲಿವುಡ್​ನ ಸಮೀರ್ ಕಲ್ಪನೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ಸದ್ಯ ರಾಧಿಕಾ ಕುಮಾರಸ್ವಾಮಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ನಿರ್ದೇಶಿಸಿ, ನಟಿಸ್ತಿರೋ ರಾಜೇಂದ್ರ ಪೊನ್ನಪ್ಪ ಚಿತ್ರದಲ್ಲೂ ನಟಿಸಿದ್ದಾರೆ. ರಾಧಿಕಾ ನಟನೆಯ ಕಾಂಟ್ರ್ಯಾಕ್ಟ್​ ಮತ್ತು ರಾಜೇಂದ್ರ ಪೊನ್ನಪ್ಪ ಎರಡು ಸಿನಿಮಾಗಳು ರಿಲೀಸ್ ಆಗುವ ಹಂತ ತಲುಪಿದ್ದು ಸ್ವೀಟಿ ಮತ್ತೊಮ್ಮೆ ಸಿಲ್ವರ್​​ ಸ್ಕ್ರೀನ್​​ನಲ್ಲಿ ಮಿಂಚೋ ಸೂಚನೆ ಸಿಕ್ತಿದೆ.

Next Story

RELATED STORIES