Top

ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ಬಿಎಸ್ ವೈ ನಿರ್ಧಾರ

ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ಬಿಎಸ್ ವೈ ನಿರ್ಧಾರ
X

ರಾಜ್ಯದಲ್ಲಿ 104 ಸೀಟ್ ಗೆದ್ದರೂ ಕೂಡ ಸರ್ಕಾರ ರಚಿಸಲು ಸಾಧ್ಯವಾಗದೇ ಅಸಮಾಧಾನಗೊಂಡಿರುವ ಬಿ.ಎಸ್.ಯಡಿಯೂರಪ್ಪ, ಮೈತ್ರಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲು ಸಿದ್ಧರಾಗಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ರಾಜ್ಯ ಪ್ರವಾಸ ಮಾಡಲು ಬಿಎಸ್ ವೈ ನಿರ್ಧರಿಸಿದ್ದು, ಜೂನ್ ನಿಂದ ಬಿಎಸ್ ವೈ ರಾಜ್ಯ ಪ್ರವಾಸ ಆರಂಭಿಸುವ ಸಾಧ್ಯತೆ ಇದೆ. ನಾಳೆ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಲಿದ್ದು, ವಿಶ್ವಾಸ ಮತ ಸಾಬೀತು ಬಳಿಕ ಮೈತ್ರಿ ಸರ್ಕಾರದ ನಡೆ ನೋಡಿ ಹೆಜ್ಜೆ ಇಡಲು ಬಿ.ಎಸ್.ವೈ ತೀರ್ಮಾನಿಸಿದ್ದಾರೆ. ಸಂಘಟನಾತ್ಮಕವಾಗಿ ಬಿಜೆಪಿ 36 ಜಿಲ್ಲೆಗಳಿದೆ.ಹೀಗಾಗಿ ದಿನಕ್ಕರೆಡರಂತೆ 18 ದಿನಗಳ ಕಾಲ ನಿರಂತರ ಸಭೆಯನ್ನು ನಡೆಸಲು ಬಿ.ಎಸ್.ವೈ ನಿರ್ಧರಿಸಿದ್ದಾರೆ.ಸಭೆಯಲ್ಲಿ ಆಯಾ ಜಿಲ್ಲೆಗಳ ಪದಾಧಿಕಾರಿಗಳು, ಮಂಡಲ ಪದಾದಿಕಾರಿಗಳು, ವಿಸ್ತಾರಕರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ದ ರಾಜ್ಯಾದ್ಯಂತ ವಿರೋಧಿ ಅಲೆ ಸೃಷ್ಟಿಸುವ ನಿಟ್ಟಿನಲ್ಲಿ ಬಿಜೆಪಿ ಹೋರಾಟಕ್ಕಿಳಿದಿದೆ.ಅವಕಾಶವಾದಿ ರಾಜಕಾರಣದಿಂದ ಜೆಡಿಎಸ್ ಅಧಿಕಾರ ಹಿಡಿದಿದ್ದು, ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಜನರಿಗೆ ಮನವರಿಕೆ ಮಾಡುವುದು, ಮೈತ್ರಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳಿಂದ ಸುಭದ್ರ ಣ ಸುಸೂತ್ರ ಸರ್ಕಾರ ಸಾಧ್ಯವಿಲ್ಲ ಎಂದು ಜನರಿಗೆ ತಿಳಿಸುವ ಯೋಚನೆ ಬಿಎಸ್ ವೈರದ್ದಾಗಿದೆ.ಈ ಬಾರಿ ನಾವು ವಂಚಿತರಾಗಿದ್ದೇವೆ, ಆದರೆ ಲೋಕಸಭಾ ಚುನಾವಣೆಯಲ್ಲಾದರೂ ಬಿಜೆಪಿಗೆ ಪ್ರಚಂಡ ಬಹುಮತ ನೀಡಿ ಎಂದು ಜನರ ಬಳಿ ಬಿಎಸ್ ವೈ ಮನವಿ ಮಾಡಲಿದ್ದಾರೆ. ಈ ಮೂಲಕ ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ, ಹೋರಾಟಕ್ಕಿಳಿದಿದ್ದಾರೆ.

Next Story

RELATED STORIES