ಬೀದರ್ನಲ್ಲಿ ಬಿಸಿಲ ಝಳಕ್ಕೆ ಮೊದಲ ಬಲಿ

X
TV5 Kannada24 May 2018 6:38 AM GMT
ಬೀದರ್ : ವರುಣನ ಸಿಂಚನ ರಾಜ್ಯದೆಲ್ಲೆಡೆ ಆರಂಭವಾಗಿದೆ. ಆದರೂ ಬಿಸಿಲ ಜಳ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಬೀದರ್ ಜಿಲ್ಲೆಯಲ್ಲಿ ಬಿಸಿಲ ಝಳಕ್ಕೆ ಮೊದಲ ಬಲಿ ಆಗಿರುವ ಪ್ರಕರಣವೊಂದು ನಡೆದಿದೆ.ಬಸವಕಲ್ಯಾಣದ ಹಣಮಂತವಾಡಿ ಬಳಿ, ನಿಂಗಪ್ಪ ಶಿವಪ್ಪ ಎಂಬವರು ಮೃತಪಟ್ಟಿದ್ದು, ಇವರ ಸಾವಿಗೆ ಬಿಸಿಲ ಝಳವೇ ಕಾರಣ ಎಂದು ಹೇಳಲಾಗುತ್ತಿದೆ.
ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ ನಿಂಗಪ್ಪ ಶಿವಪ್ಪ, ನಿನ್ನೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇಂದು ಬೆಳಕಿಗೆ ಬಂದಿದ್ದು, ಇವರ ಸಾವಿಗೆ ಬಿಸಿಲಿನ ತಾಪಮಾನ ಕಾರಣ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
Next Story