Top

ಫೇಸ್ಬುಕ್ ಪ್ರಿಯತಮೆಗಾಗಿ ಹೆತ್ತವರನ್ನೇ ಕೊಂದ ಪಾಪಿ

ಫೇಸ್ಬುಕ್ ಪ್ರಿಯತಮೆಗಾಗಿ ಹೆತ್ತವರನ್ನೇ ಕೊಂದ ಪಾಪಿ
X

ದೆಹಲಿ: ಬಾಲ್ಯದಲ್ಲಿ ಮಕ್ಕಳು ತಮಗೆ ಬೇಕಾದ ವಸ್ತುವನ್ನು ಪಡೆಯಲು ಹಠ ಮಾಡುವುದು ಸಹಜ. ಆದರೆ ಹಠ ಮಾಡಿದಾಗ ಅವರು ಕೇಳಿದ್ದನ್ನು ಕೊಟ್ಟು ಅಭ್ಯಾಸ ಮಾಡುವ ಪೋಷಕರಿಗೆ ಇಲ್ಲೊಂದು ಘಟನೆ ಎಚ್ಚರಿಕೆ ಗಂಟೆಯಾಗಿದೆ.

ಫೇಸ್ ಬುಕ್ ಪ್ರಿಯತಮೆಯೊಂದಿಗೆ ಮದುವೆಯಾಗಲು ಅನುಮತಿ ನಿರಾಕರಿಸಿದ್ದಕ್ಕೆ, 26 ವರ್ಷದ ಯುವಕನೋರ್ವ ತನ್ನ ಹೆತ್ತವರನ್ನೇ ಕೊಲೆ ಮಾಡಿದ್ದಾನೆ. ದೆಹಲಿಯ ಜಾಮಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಅಬ್ದುಲ್ ರೆಹಮಾನ್ ತಂದೆ ತಾಯಿಯನ್ನು ಕೊಂದ ಆರೋಪಿಯಾಗಿದ್ದಾನೆ. ಈತ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ, ಆದರೆ ಮಾದಕದೃವ್ಯ ವ್ಯಸನಿಯಾಗಿದ್ದ ಈತನನ್ನು ಕೆಲಸದಿಂದ ಹೊರದಬ್ಬಲಾಗಿತ್ತು. ಅಲ್ಲದೇ ಈತ ಒಂದು ಮದುವೆಯಾಗಿ, ಆಕೆಯಿಂದ ವಿಚ್ಛೇದನ ಪಡೆದು, ನಂತರ 2017ರಲ್ಲಿ ಇನ್ನೊಬ್ಬ ಯುವತಿಯನ್ನು ವರಿಸಿದ್ದ.ಆದರೆ ಕಳೆದ ಎರಡು ವರ್ಷದಿಂದ ಫೇಸ್ ಬುಕ್ ನಲ್ಲಿ ನಾಗ್ಪುರದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ರೆಹಮಾನ್, ಆಕೆಗೆ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ. ಈ ಕಾರಣಕ್ಕಾಗಿ, ಪೋಷಕರಲ್ಲಿ ತಾನು ಆ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿದಾಗ, ಪೋಷಕರು ನಿರಾಕರಿಸಿದ್ದಾರೆ.ಈ ಕಾರಣಕ್ಕೆ ಸಿಟ್ಟಿಗೆದ್ದ ರೆಹಮಾನ್, ಹೆತ್ತವರನ್ನು ಕೊಲ್ಲಲು ನದೀಮ್ ಖಾನ್ ಮತ್ತು ಗುಡ್ಡು ಎಂಬುವರಿಗೆ ಎರಡುವರೆ ಲಕ್ಷ ರೂಪಾಯಿ ಸುಪಾರಿ ನೀಡಿದ್ದಾನೆ. ಇಬ್ಬರು ದುರುಳರು ಮನೆಗೆ ನುಗ್ಗಿ ರೆಹಮಾನ್ ತಂದೆ ಶಮೀಮ್ ಅಹಮದ್(55), ತಾಯಿ ತಸ್ಲೀಮಾ ಬಾನು(50) ರನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

Next Story

RELATED STORIES