Top

ತೂತುಕುಡಿ ಗೋಲಿಬಾರ್ ಖಂಡಿಸಿದ ರಜನಿಕಾಂತ್​

ತೂತುಕುಡಿ ಗೋಲಿಬಾರ್ ಖಂಡಿಸಿದ ರಜನಿಕಾಂತ್​
X

ತಮಿಳುನಾಡಿನ ತೂತುಕುಡಿಯಲ್ಲಿ ಸ್ಟೆರ್​ಲೈಟ್ ಕಂಪನಿ ಮುಚ್ಚಬೇಕು ಅಂತ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಿಂದಾಗಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆಗೆ ನಟ ರಜಿನಿಕಾಂತ್ ಖಂಡಿಸಿದ್ದಾರೆ.

ಘಟನೆಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ರಜನಿಕಾಂತ್, ಇದು ಅಮಾನವೀಯ ಕೃತ್ಯ ಎಂದಿರೋ ರಜಿನಿ ಪೊಲೀಸ್ ಇಲಾಖೆ ವಿರುದ್ದ ಕಿಡಿಕಾರಿದ್ದಾರೆ.

ಇಂಗ್ಲೆಂಡ್ ಮೂಲದ ವೇದಾಂತ ರಿಸೋರ್ಸಸ್‌ನ ಅಂಗಸಂಸ್ಥೆ ಸ್ಟೆರ್‌ಲೈಟ್ ತಾಮ್ರದ ಕುಲುಮೆ ಘಟಕ ವಿಸ್ತರಣೆ ವಿರೋಧಿಸಿ ಕಳೆದ 3 ತಿಂಗಳಿನಿಂದ ಸ್ಥಳೀಯರು ತೂತುಕುಡಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಘಟಕದ ಸುತ್ತಮುತ್ತಲ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಅಂತ ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. 2013ರ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ 100 ಕೋಟಿ ರೂ. ದಂಡ ವಿಧಿಸಿತ್ತು.

ಇಷ್ಟೆಲ್ಲಾ ಪ್ರತಿಭಟನೆ ನಡೀತಿದ್ರೂ, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಹಲವು ಸಂಘಟನೆಗಳು, ಸ್ಥಳೀಯ ನಾಗರಿಕರು ಮಂಗಳವಾರ ದೊಡ್ಡ ಸಂಖ್ಯೆಯಲ್ಲಿ ತೂತುಕುಡಿ ಜಿಲ್ಲಾಧಿಕಾರಿ ಕಚೇರಿಗೆ ರ‍್ಯಾಲಿಯಲ್ಲಿ ತೆರಳುತ್ತಿದ್ದರು. ಹೋರಾಟ ಹಿಂಸಾಚಾರಕ್ಕೆ ತಿರುಗಿತು. ಹೋರಾಟಗಾರರನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್​ ಪ್ರಯೋಗಿಸಿದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Next Story

RELATED STORIES