ಚೆನ್ನೈ ಅಖಾಡಕ್ಕೆ ರೆಡಿಯಾದ ಪೈಲ್ವಾನ್!

X
TV5 Kannada23 May 2018 9:50 AM GMT
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಎಸ್.ಕೃಷ್ಣ ಸಾರಥ್ಯದಲ್ಲಿ ಚಿತ್ರ ಮೂಡಿಬರಲಿದೆ. ಶೂಟಿಂಗ್ಗಾಗಿ ಚೆನ್ನೈ ತಲುಪಿದೆ ಪೈಲ್ವಾನ್ ಫಿಲಂನ ಫುಲ್ ಟೀಮ್. ಕಿಚ್ಚ ಸುದೀಪ್ ಟ್ವೀಟ್ಟರ್ನಲ್ಲಿ ತಿಳಿಸಿದಂತೆ ನುರಿತ ತಂತ್ರಜ್ಞರು ಪೈಲ್ವಾನ್ ಬಳಗದಲ್ಲಿದ್ದಾರೆ. ಚೆನ್ನೈಗೆ ಯಾಕೆ ಚಿತ್ರತಂಡ ಹೋಗಿದೆ ಅನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಪೈಲ್ವಾನ್ ಬಳಗ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರುವ ಯೋಜನೆಯಲ್ಲಿ ಚೆನ್ನೈನಲ್ಲಿ ಬಿಡುಬಿಟ್ಟಿದೆ. ಚೆನ್ನೈ ನಗರದ ಈವಿಪಿ ಫಿಲ್ಮಂ ಸಿಟಿಯಲ್ಲಿ ದೊಡ್ಡ ಸೆಟ್ ಹಾಕಲಾಗಿದೆ. ಸೆಟ್ ಹೇಗಿರಲಿದೆ ಅನ್ನೊ ಸೀಕ್ರೆಟ್ ಅನ್ನು ಬಹಿರಂಗಪಡಿಸಿದೆ ಸುದೀಪ್ ಫ್ಯಾನ್ಸ್. ಅಖಿಲ ಕರ್ನಾಟಕ ಕಿಚ್ಚ ಸೇನಾ ಸಮಿತಿಯ ಸದಸ್ಯರು ಲ್ವಾನ್ ಸೆಟ್ಗೆ ಭೇಟಿ ನೀಡಿ ಸುದೀಪ್ ಜೊತೆಗೆ ಕಾಲ ಕಳೆದಿದ್ದಾರೆ. ಜೊತೆಗೆ ಪೈಲ್ವಾನ್ ಮೂಡಿಬರಲಿರುವ ಸ್ಥಳವನ್ನ ಕ್ಯಾಮೆರಾದಲ್ಲಿ ಸೇರೆ ಮಾಡಿ ಸೋಷಿಯಲ್ ಮೀಡಿಯದಲ್ಲಿ ತೇಲಿಬಿಟ್ಟಿದ್ದಾರೆ.
Next Story