Top

ಕೇವಲ ಪ್ರಮಾಣವಚನ ಅಲ್ಲ, ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರ!

ಕೇವಲ ಪ್ರಮಾಣವಚನ ಅಲ್ಲ, ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರ!
X

ದೇಶಾದ್ಯಂತ ಸುದ್ದಿ ಮಾಡಿದ ಕರ್ನಾಟಕ ವಿಧಾನಸಭಾ ಚನಾವಣೆಯ ಫಲಿತಾಂಶ ಹೊರಬಿದ್ದ ನಂತರ ಇನ್ನಷ್ಟು ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವ ಬೀರುವ ಸೂಚನೆ ನೀಡಿದೆ. ಬುಧವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದಿಂದ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ರಾಷ್ಟ್ರ ರಾಜಕಾರಣದಲ್ಲಿ ಬೃಹತ್ ಮೈತ್ರಿಕೂಟದ ವೇದಿಕೆಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಾಕ್ಷಿಯಾಯಿತು.

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಎಡಪಕ್ಷದ ಮುಖಂಡ ಸೀತಾರಾಂ ಯೆಚೂರಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್​, ಮಾಜಿ ಮುಖ್ಯಮಂತ್ರಿ ಮಾಯಾವತಿ, ಪುದುಚೇರಿ ಸಿಎಂ ನಾರಾಯಣಸ್ವಾಮಿ.. ಹೀಗೆ ದೇಶದ ಪ್ರಾದೇಶಿಕ ಪಕ್ಷಗಳ ದಿಗ್ಗಜರು ಆಗಮಿಸಿದರು.

ತಮಿಳುನಾಡಿನ ತೂತುಕೂಡಿಯಲ್ಲಿ ಪ್ರತಿಭಟನೆ ಹಾಗೂ ಗೋಲಿಬಾರ್ನಿಂದ ಉದ್ಭವಿಸಿದ ಸಮಸ್ಯೆಯಿಂದಗಿ ಡಿಎಂಕೆ ಪಕ್ಷದ ಸ್ಟಾಲಿನ್​, ನಟ ಕಮಲ್ ಹಾಸನ್ ಮುಂತಾದ ಗಣ್ಯರು ಅನುಪಸ್ಥಿತರಾದರೆ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಆಗಮಿಸಿ ಕುಮಾರಸ್ವಾಮಿ ಅವರನ್ನು ಅಭಿನಂದಿಸಿ ಹಿಂತಿರುಗಿಸಿದರು.

ಎಲ್ಲಾ ಪ್ರಾದೇಶಿಕ ಪಕ್ಷಗಳ ಜೊತೆಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ರಾಜ್ಯ ಶಕ್ತಿವಾಗಿದ್ದರೆ ಕೇಂದ್ರವೂ ಬಲವಾಗಿರುತ್ತದೆ. ಕಾಂಗ್ರೆಸ್ ಬೇರೆಯದೇ ಪಕ್ಷ, ಅವರ ಕೆಲಸ ಅವರು ಮಾಡ್ತಾರೆ, ನಮ್ಮ ಕೆಲಸ ನಾವು ಮಾಡುತ್ತೇವೆ. ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ಕೊಡಲು ನಾವು ಇಲ್ಲಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಈ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶ ನೀಡಿದರು.

ಇದೇ ಮಾತನ್ನು ಚಂದ್ರಬಾಬು ನಾಯ್ಡು ಪುನರುಚ್ಚರಿಸಿದರು. ಪ್ರಾದೇಶಿಕ ಪಕ್ಷಗಳ ಒಗ್ಗಟ್ಟಾಗಿರಲು ನಾವು ಮಾತುಕತೆ ನಡೆಸುತ್ತಿದ್ದೇವೆ. ಇದೀಗ ಜೆಡಿಎಸ್​ಗೆ ಬೆಂಬಲ ನೀಡುವ ಉದ್ದೇಶದಿಂದ ಬಂದಿದ್ದೇವೆ ಎಂದರು.

Next Story

RELATED STORIES