ಐಪಿಎಲ್: ಫೈನಲ್ಗೆ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ: ಫಾಫ್ ಡು ಪ್ಲೆಸಿಸ್ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ತಲುಪಿದೆ.ಸನ್ರೈಸರ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಧೋನಿ ಪಡೆ ಎರಡು ವಿಕೆಟ್ಗಳ ರೋಚಕ ಜಯ ಪಡೆದು ಕಲ್ಲರ್ ಫುಲ್ ಟೂರ್ನಿಯಲ್ಲಿ ಏಳನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ತಂಡ ಚೆನ್ನೈ ದಾಳಿಗೆ ತತ್ತರಿಸಿ ನಿಗದಿತ ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ ಕೆವಲ 139 ರನ್ ಗಳಿಸಿತು. ತಂಡದ ಆಲ್ರೌಂಡರ್ ಕಾರ್ಲೊಸ್ ಬ್ರಾಥ್ವೈಟ್ ಅಜೇಯ 43 ರನ್ ಬಾರಿಸಿದ್ರು. ಚೆನ್ನೈ ಪರ ಡ್ವೇನ್ ಬ್ರಾವೋ 2 ವಿಕೆಟ್ ಪಡೆದ್ರು.
ಸಾಧರಣ ಮೊತ್ತ ಬೆನ್ನತ್ತಿದ ಚೆನ್ನೈ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭದಲ್ಲೆ ಶಾಕ್ ನೀಡಿದ್ರು. ನಂತರ ಬಂದ ಸುರೇಶ್ ರೈನಾ (22), ಅಂಬಾಟಿ ರಾಯ್ಡು(0), ಧೋನಿ (9), ಡ್ವೇನ್ ಬ್ರಾವೋ (7) ಬಾರಿಸಿದ್ರು. ಏಕಾಂಗಿ ಹೋರಾಟ್ ನಡೆಸಿದ ಫಾಫ್ ಡುಪ್ಲೇಸಿಸ್ 42 ಎಸೆತದಲ್ಲಿ 5 ಬೌಂಡರಿ 4 ಸಿಕ್ಸರ್ ಸಿಡಿಸಿ ಅಜೇಯ 67 ರನ್ ಬಾರಿಸಿ ತಂಡದ ಗೆಲುವಿನ ರೂವಾರಿಯಾದ್ರು. ಚೆನ್ನೈ ತಂಡ 19.1 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು