Top

ನೂತನ ಮುಖ್ಯಮಂತ್ರಿಗಾಗಿ ಹರಕೆ ತೀರಿಸಿದ ಅಭಿಮಾನಿಗಳು

ನೂತನ ಮುಖ್ಯಮಂತ್ರಿಗಾಗಿ ಹರಕೆ ತೀರಿಸಿದ ಅಭಿಮಾನಿಗಳು
X

ಬೆಳಗಾವಿ : ಇಂದು ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ, ಹೆಚ್ಡಿಕೆ ಅಭಿಮಾನಿಗಳು ಹರಕೆ ತೀರಿಸಿದ್ದಾರೆ. ಈ ಬಾರಿ ಹೆಚ್ಡಿಕೆ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದ ಅಭಿಮಾನಿಗಳು, ಇಂದು ಹರಕೆ ತೀರಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಹೆಚ್ಡಿಕೆ ಅಭಿಮಾನಿ ಪ್ರಭಾಕರ್ ಗಗರಿ ಎಂಬುವವರು ಧೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ.ಇಲ್ಲಿನ ಹಾಲಳ್ಳದಿಂದ ಚಿಂಚಲಿ ದೇವಸ್ಥಾನದವರೆಗೆ 3ಕಿ.ಮೀ ಧೀರ್ಘದಂಡ ನಮಸ್ಕಾರ ಸಲ್ಲಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ, ತುಮಕೂರಿನ ತಿಪಟೂರಿನಿಂದ ಹೆಚ್ಡಿಕೆ ಅಭಿಮಾನಿಗಳು ಒಂದು ಲಾರಿ ಲೋಡ್ ವಿಶೇಷವಾದ ಕೊಬ್ಬರಿ ಮಿಠಾಯಿ ರವಾನಿಸಿದ್ದಾರೆ. ವಿಧಾನಸೌಧಕ್ಕೆ ಸಿಹಿ ರವಾನಿಸಲಾಗಿದ್ದು, ಹೆಚ್ಡಿಕೆ ಕಾರ್ಯಕ್ರಮದಲ್ಲಿ ಈ ತಿಪಟೂರಿನ ಸಿಹಿಯನ್ನುಹಂಚಲಾಗುತ್ತದೆ.

ಇನ್ನೊಂದೆಡೆ ಬಳ್ಳಗೆರೆ ಗ್ರಾಮದಲ್ಲಿ 20 ಜನ ಜೆಡಿಎಸ್ ಕಾರ್ಯಕರ್ತರು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಹರಕೆ ತೀರಿಸಿದ್ದಾರೆ.ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿಗೆ ಸಿಎಂ ಸ್ಥಾನ ಲಭಿಸಿದರೆ ಕೇಶ ಮುಂಡನೆ ಮಾಡುವುದಾಗಿ ಹರಕೆ ಹೊತ್ತಿದ್ದರು. ಈ ಕಾರಣಕ್ಕಾಗಿ ಗ್ರಾಮದ ಕೋಡಿ ಆಂಜನೇಯ ಸ್ವಾಮಿಗೆ ಹರಕೆ ತೀರಿಸಿ, ವಿಶೇಷ ಪೂಜೆ ಸಲ್ಲಿಸಿದರು.

Next Story

RELATED STORIES