Top

ಮಗನೊಂದಿಗೆ ಕುಸ್ತಿ ಆಡಲಿದ್ದಾರೆ ದುನಿಯಾ ವಿಜಿ

ಮಗನೊಂದಿಗೆ ಕುಸ್ತಿ ಆಡಲಿದ್ದಾರೆ ದುನಿಯಾ ವಿಜಿ
X

ಹುಲಿ ಹೊಟ್ಟೆಯಲ್ಲಿ ಹುಲಿನೇ ಹುಟ್ಟೋದು ಅನ್ನೋ ಗಾದೆ ಮಾತಿದೆ. ಈಗ ಆ ಮಾತಿಗೆ ಸ್ಯಾಂಡಲ್​ವುಡ್ ಅಂಗಳದಲ್ಲೊಂದು ತಾಜಾ ಎಕ್ಸಾಂಪಲ್ ಸಿಕ್ಕಿದೆ. ದುನಿಯಾ ವಿಜಿ, ಕನ್ನಡ ಚಿತ್ರರಂಗದ ಕಟ್ಟುಮಸ್ತಾದ​​ ನಾಯಕರಲ್ಲೊಬ್ಬರು. ಇಷ್ಟು ದಿನ ಸಿನಿಮಾದಿಂದ ಸಿನಿಮಾಗೆ ಹೊಸ ಹೊಸ ಪ್ರಯತ್ನದಿಂದ ಬೇಷ್​​​ ಅನ್ನಿಸಿಕೊಳ್ಳುತ್ತಿದ್ರು. ಆದ್ರೆ ಈ ಬಾರಿ ಕೊಂಚ ಬದವಾಣೆಯಾಗಿದೆ, ವಿಜಿ ಬದಲು ಅವರ ಮಗ ಸಾಮ್ರಾಟ್​​ ಬಂದು ನಿಂತಿದ್ದಾರೆ.

ಹೌದು.. ದುನಿಯಾ ವಿಜಯ್ ‘ಜಾನಿ ಜಾನಿ ಎಸ್​​ ಪಪ್ಪಾ’ ಚಿತ್ರದ ನಂತರ ‘ಕುಸ್ತಿ’ ಅಖಾಡಕ್ಕೆ ಇಳಿಯಲಿದ್ದಾರೆ. ಈ ಬಾರಿ ತಾವು ಒಬ್ಬರೇ ಇಳಿಯುತ್ತಿಲ್ಲ , ಜೊತೆಗೆ ತಮ್ಮ ಮಗ ಸಾಮ್ರಾಟ್ ವಿಜಯ್​ನ ಕೂಡ ಅಖಾಡಕ್ಕೆ ಇಳಿಸ್ತಿದ್ದಾರೆ. ಇತ್ತೀಚೆಗೆ ದುನಿಯಾ ವಿಜಿ 44ನೇ ಜನ್ಮದಿನದ ಅಂಗವಾಗಿ ‘ಕುಸ್ತಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಲಾಗಿತ್ತು. ಅಲ್ಲಿ ವಿಜಿ ಪುತ್ರ ಸಾಮ್ರಾಟ್ ವಿಜಯ್ ಎಲ್ಲರ ಗಮನ ಸೆಳೆದಿದ್ದರು. ಇದೀಗ ಏಕ್ಧಮ್ ಕುಸ್ತಿಗಾಗಿ ಸಾಮ್ರಾಟ್ ತಯಾರಿಯ ಬೊಂಬಾಟ್ ವಿಡಿಯೋ ರಿಲೀಸ್ ಆಗಿದೆ.

ನವ ನಿರ್ದೇಶಕ ಅನಿಲ್ ಮಂಡ್ಯ ಕಲ್ಪನೆಯಲ್ಲಿ ‘ಕುಸ್ತಿ’ ಚಿತ್ರದ ಮೂಡಿಬರಲಿದ್ದು, ಸ್ವತಃ ದುನಿಯಾ ವಿಜಿನೇ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದುನಿಯಾ ಟಾಕೀಸ್ ಹೋಮ್ ಬ್ಯಾನರ್​ನಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರೋ ವಿಜಿ, ತನ್ನಂತೆ ಮಗನಿಗೂ ನುರಿತ ತಜ್ಞರಿಂದ ತರಬೇತಿ ಕೊಡಿಸುತ್ತಿದ್ದಾರೆ. 11ವರ್ಷದ ಸಾಮ್ರಾಟ್​​ ವಿಜಯ್, ಪ್ರತೀ ದಿನ ಅಪ್ಪನ ಜೊತೆ ಜಿಮ್, ಜಾಗಿಂಗ್, ಕುಸ್ತಿ ಅಖಾಡ ಹೀಗೆ ಡಯೆಟ್ ಸಮೇತ ಎಲ್ಲದರಲ್ಲೂ ಭಾಗಿಯಾಗ್ತಿದ್ದಾರೆ.

ಸಾಮ್ರಾಟ್ ವಿಜಯ್ ಸಿನಿದುನಿಯಾಗೆ ಈ ರೀತಿ ಎಂಟ್ರಿ ಕೊಡ್ತಿರೋದು ನೋಡಿ ಇಡೀ ಉದ್ಯಮ ಹುಬ್ಬೇರಿಸಿದೆ. ಇಷ್ಟು ಸಣ್ಣ ವಯಸ್ಸಿಗೆ ಈ ರೀತಿಯ ಡೆಡಿಕೇಷನ್, ಹಾರ್ಡ್​ ವರ್ಕ್​ ಅಪ್ಪನಿಂದ ಮಾತ್ರವೇ ಸಾಧ್ಯವಾಗ್ತಿದೆ ಎನ್ನಲಾಗ್ತಿದೆ. ಅದೇನೇ ಆಗಲಿ, ತಂದೆಯ ಹಾದಿಯಲ್ಲಿ ಮಗ ಕೂಡ ಜರ್ನಿ ಶುರು ಮಾಡ್ತಿರೋದು ಮೆಚ್ಚಲೇಬೇಕು. ದುನಿಯಾ ವಿಜಿ ಮತ್ತು ಸಾಮ್ರಾಟ್ ವಿಜಯ್ ಟೀಂಗೆ ನಮ್ಮ TV5 ಕಡೆಯಿಂದ ಶುಭಾಶಯ ಕೋರೋಣ.

ಸಾಮ್ರಾಟ್​ ​​​​

Next Story

RELATED STORIES