Top

ಪಾಪ್​ಕಾರ್ನ್​​ ಜೊತೆ ಹುಲಿ-ಕೋತಿ ಕರ್ಕೊಂಡ್ ಬರ್ತಿದ್ದಾರೆ ಸೂರಿ..!

ಪಾಪ್​ಕಾರ್ನ್​​ ಜೊತೆ ಹುಲಿ-ಕೋತಿ ಕರ್ಕೊಂಡ್ ಬರ್ತಿದ್ದಾರೆ ಸೂರಿ..!
X

ಟಗರು ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಸೂರಿ ಯಾವ ಸಿನಿಮಾ ಮಾಡ್ತಾರೆ ಅನ್ನೊ ಕುತೂಹಲ ಎಲ್ಲರ ಮನದಲ್ಲಿ ಇತ್ತು. ಅದಕ್ಕೆ ಪೂರಕ ಅನ್ನುವಂತೆ ಟಗರು ಸಿನಿಮಾ ರಿಲೀಸ್​ ಆಗುವ ಮುನ್ನವೇ ಟಗರು-2 ಚಿತ್ರದ ಮುಹೂರ್ತವನ್ನ ಸದ್ದಿಲ್ಲದೆ ಮಾಡಲಾಗಿತ್ತು. ಕಾಗೆ ಬಂಗಾರ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

ಆದ್ರೆ ಇದೆಲ್ಲಾ ಬಿಟ್ಟು ದುನಿಯಾ ಸೂರಿ ಚಿತ್ರ ರಸಿಕರಿಗೆ ಮತ್ತೊಂದು ಹುಬ್ಬೇರಿಸುವಂತಹ ಸುದ್ದಿ ಕೊಟ್ಟಿದ್ದಾರೆ. ಟಗರು ಸಕ್ಸಸ್ ಅಲೆಯಲ್ಲೇ ಡಾಲಿ ಧನಂಜಯ ಚಿತ್ರ ಶುರು ಮಾಡಿದ್ದ ಸೂರಿ, ಚಿತ್ರದ ಟೈಟಲ್ ಫೈನಲ್ ಮಾಡಿದ್ದಾರೆ. ಪಾಪ್​ ಕಾರ್ನ್ ಮಂಕಿ ಟೈಗರ್ ಅನ್ನೋ ವಿಭಿನ್ನ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಕುತೂಹಲ ಕೆರಳಿಸಿದ್ದಾರೆ. ಇನ್ನುಳಿದ ಪಾತ್ರವರ್ಗದ ಆಯ್ಕೆ ನಡೆಯಬೇಕಿದೆ.

ಶೇಖರ್ ಎಸ್ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಟಗರು ಚಿತ್ರದ ಡಾಲಿ ಪಾತ್ರ ಹೊಸ ಅಲೆಯನ್ನೇ ಸೃಷ್ಟಿಸಿದ್ದು ಗೊತ್ತೇಯಿದೆ. ಹಾಗಾದ್ರೆ ಪಾಪ್​ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಧನಂಜಯ ಅವರನ್ನು ಸೂರಿ ಇನ್ಯಾವ ರೀತಿ ತೋರಿಸ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ಟಗರು ಸಿನಿಮಾ ನಿರ್ಮಿಸಿ ಸಕ್ಸಸ್ ಕಂಡ ಕೆ. ಪಿ ಶ್ರೀಕಾಂತ್ ಈ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ. ಟಗರು ಶತದಿನೋತ್ಸವದ ಸಂಭ್ರಮದಲ್ಲಿ ಈ ಹೊಸ ಚಿತ್ರದ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Next Story

RELATED STORIES