Top

ಕೈ-ತೆನೆ ಮೈತ್ರಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಕೈ-ತೆನೆ ಮೈತ್ರಿ ವಿರೋಧಿಸಿ ಬಿಜೆಪಿ ಪ್ರತಿಭಟನೆ
X

ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಮೈತ್ರಿಯನ್ನ ವಿರೋಧಿಸಿ, ಬಿಜೆಪಿ ಇಂದು ಕರಾಳ ದಿನ ಆಚರಿಸುತ್ತಿದೆ. ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇಂದು ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ವಿರುದ್ಧ ಕರಾಳ ದಿನ ಆಚರಣೆ ಮಾಡುತ್ತಿದ್ದೇವೆ.ಈ ಸರ್ಕಾರ 5 ವರ್ಷ ಆಡಳಿತ ಮಾಡಲ್ಲ, ಮೂರು ತಿಂಗಳೂ ಕೂಡ ಈ ಸರ್ಕಾರ ನಡೆಯಲ್ಲವೆಂದು ಬಿಎಸ್ ವೈ ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಲೇವಡಿ ಮಾಡಿದ ಅಬ್ದುಲ್ ನಜೀಂ, ನಾವು ಲವ್ ಮ್ಯಾರೇಜ್, ಅರೇಂಜ್ ಮ್ಯಾರೇಜ್ ಬಗ್ಗೆ ಕೇಳಿದ್ದೆವು. ಈ ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಯಾವ ಗುಂಪಿಗೆ ಸೇರಿಸುವುದು ಎಂದು ಹೇಳಿದ್ದಾರೆ.

ಕೈ-ತೆನೆ ಮೈತ್ರಿ ಬಗ್ಗೆ ಕಿಡಿ ಕಾರಿದ ನಟ ಜಗ್ಗೇಶ್, ಮೋದಿ ಎಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ ನರಿ ತಿಗಣೆಗಳೆಲ್ಲಾ ಹೇಗೆ ಒಂದಾಗಿದೆ ಅಂತಾ ಗೊತ್ತಿದೆಯಲ್ಲ. ಮೂರು ತಿಂಗಳಲ್ಲಿ ಈ ಸರ್ಕಾರ ಬಿದ್ದು ಹೋಗಲಿಲ್ಲವೆಂದರೆ ಬೃಂದಾವನದಲ್ಲಿ ರಾಯರೇ ಇಲ್ಲ ಎಂದಂತಾಗುತ್ತದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಜನ ಕಾಂಗ್ರೆಸ್ ಮತ್ತು ಜೆಡಿಎಸ್ ನ್ನು ಜನ ತಿರಸ್ಕರಿಸಿ, ಮನೆಗೆ ಕಳುಹಿಸಿದ್ದರು. ಆದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಬರಬಾರದು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ.ಕರ್ನಾಟಕ ಕಾಂಗ್ರೆಸ್ ಗೆ ಎಟಿಎಂ ಕಾರ್ಡ್ ಆಗಿತ್ತು. ಆ ಎಟಿಎಂ ಉಳಿಸಿಕೊಳ್ಳಲು ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಅರವಿಂದ ಲಿಂಬಾವಳಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಯಾರೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲವೋ ಅವರೇ ಒಟ್ಟಿಗೆ ಸರ್ಕಾರ ಮಾಡಿದ್ದಾರೆ. ಎಷ್ಟು ದಿನ ನಡೆಯುತ್ತೆ ಇವರ ದೊಂಬರಾಟ. ಒಂದು ಕಡೆ ಶಾಸಕರನ್ನು ಕೂಡಿ ಹಾಕಿ ಬಿಜೆಪಿಯನ್ನು ದೂಷಿಸುವಂಥ ರಾಜಕಾರಣ ಇವರದು ಲಜ್ಜೆಗೆಟ್ಟ ಸರ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿರುವ ಆರ್.ಅಶೋಕ್, ಕುಮಾರಸ್ವಾಮಿ 50 ಸ್ಥಾನ ಗೆದ್ದರೆ ನನ್ನ ತಲೆ ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳಿದ್ದ ಜಮೀರ್, ಇಂದು ಅವರೊಂದಿಗೆ ಸಂಪುಟ ಸೇರಲು ಹೊರಟಿದ್ದಾರೆ. ಇವರಿಗೆಲ್ಲಾ ನಾಚಿಕೆಯಾಗಬೇಕು.ಜೆಡಿಎಸ್ ಜೊತೆ ಸೇರಿದವರು ಯಾವತ್ತೂ ಉದ್ಧಾರವಾಗಿಲ್ಲ.ಮೂರು ತಿಂಗಳು ಮಾತ್ರ ಇವರ ಸರ್ಕಾರವೆಂದು ಕಿಡಿಕಾರಿದ್ದಾರೆ.

Next Story

RELATED STORIES