Top

ಮಾಜಿ ಕೇಂದ್ರ ಸಚಿವರ 21 ವರ್ಷದ ಪುತ್ರ ಹೃದಯಾಘಾತದಿಂದ ಸಾವು

ಮಾಜಿ ಕೇಂದ್ರ ಸಚಿವರ 21 ವರ್ಷದ ಪುತ್ರ ಹೃದಯಾಘಾತದಿಂದ ಸಾವು
X

ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರ 21 ವರ್ಷದ ಪುತ್ರ ಬಂಡಾರ್​ ವೈಷ್ಣವ್​ ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವೈದ್ಯಕೀಯ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ ವೈಷ್ಣವ್ ಹೈದರಾಬಾದ್​ನ ರಾಮ್​ನಗರದ ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಭೋಜ ಸ್ವೀಕರಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದರು.

ಕೂಡಲೇ ಅವರನ್ನು ತಂದೆ ದತ್ತಾತ್ರೇಯ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಚಿಕಿತ್ಸೆ ನೀಡಿ ಮನೆಗೆ ವಾಪಸ್ ಕರೆದುಕೊಂಡು ಹೋಗಬಹುದು ಎಂದು ಹೇಳಿದ್ದರು. ಆದರೆ ಮಧ್ಯರಾತ್ರಿ 12.30ರ ಸುಮಾರಿಗೆ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Next Story

RELATED STORIES