Top

ಸಾಲಮನ್ನಾ ಮಾಡದಿದ್ರೆ ರಾಜ್ಯ ಬಂದ್ ಮಾಡ್ತೀವಿ-ಬಿಎಸ್ ವೈ

ಸಾಲಮನ್ನಾ ಮಾಡದಿದ್ರೆ ರಾಜ್ಯ ಬಂದ್ ಮಾಡ್ತೀವಿ-ಬಿಎಸ್ ವೈ
X

ಮೂರು ದಿನದ ಸಿಎಂ ಆಗಿ , ಬಹುಮತ ಸಾಬೀತುಪಡಿಸಲಾಗದೇ, ಹಿಂದೆ ಸರಿದಿರುವ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಗರಂ ಆಗಿದ್ದಾರೆ. ಪ್ರತಿಭಟನೆ ವೇಳೆ ರೊಚ್ಚಿಗೆದ್ದಿರುವ ಕಾಂಗ್ರೆಸ್- ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಬಹುಮತ ಬರದಿದ್ದಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಕೊಳ್ಳಲ್ಲ ಮತ್ತೆ ಚುನಾವಣೆಗೆ ಹೋಗುತ್ತೇವೆ ಇಂದಿದ್ದ ನೀವು ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲೆಸೆದಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವಿರೋಧಿಸಿ ಬಿಜೆಪಿಯಿಂದ ಕರಾಳ ದಿನಾಚರಣೆ ಆಚರಿಸಲಾಯಿತು.ನಗರದ ಮೌರ್ಯ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಯಡಿಯೂರಪ್ಪ, ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿದ್ದಾರೆ, ಅವಕಾಶವಾದಿಗಳಾಗಿದ್ದಾರೆ, ಬಹುಮತವಿಲ್ಲದಿದ್ದರೆ ವಿರೋಧಪಕ್ಷದಲ್ಲಿ ಕೂರುತ್ತೇವೆ, ಜನರ ಮುಂದೆ ಹೋಗುತ್ತೇವೆ ಎಂದಿದ್ದವರು ಈಗ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ.ನಿಮ್ಮ ಮಾತಿನಂತೆ ವಿಧಾನದಭೆ ವಿಸರ್ಜಿಸಿ ಬನ್ನಿ ನಾವು 150 ಸ್ಥಾನ ಪಡೆಯುತ್ತೇವೆ ಇಲ್ಲಿದಿದ್ದರೆ ನೀವು ಹೇಳಿದಂತೆ ಕೇಳುತ್ತೇವೆ ಎಂದು ನೇರ ದೇವೇಗೌಡರಿಗೆ ನೇರ ಸವಾಲೆಸೆದರು.ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ನಿನ್ನ ರೈತರಖಾಸಗಿ ಸಾಲ ಮನ್ನಾ ಮಾಡುವುದಾಗಿಯೂ ಹೇಳಿದ್ದಾರೆ, ಈಗ ಮನ್ನಾ ಮಾಡದಿದ್ದರೆ ರೈತ ಸಮುದಾಯವನ್ನು ಬೀದಿಗಿಳಿಸಿ ಹೋರಸಟ ನಡೆಸುತ್ತೇನೆ, ರಾಜ್ಯ ಬಂದ್ ,ಬೆಂಗಳೂರು ಬಂದ್ ಕರೆ ನೀಡಿ ನಿಮ್ಮ ನಿಜ ಬಣ್ಣವನ್ನು ಬಟಾ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

Next Story

RELATED STORIES