Top

ಕೊಹ್ಲಿ ಸಖತ್ ಹಾಟ್ : ಹೀಗಂದಿದ್ಯಾಕೆ ಸೈಫ್ ಪತ್ನಿ..?!

ಕೊಹ್ಲಿ ಸಖತ್ ಹಾಟ್ : ಹೀಗಂದಿದ್ಯಾಕೆ ಸೈಫ್ ಪತ್ನಿ..?!
X

ಬಾಲಿವುಡ್​ ಅಂಗಳದಲ್ಲಿ ಸೈಜ್ ಝೀರೊ ಟ್ರೆಂಡ್​ ಹುಟ್ಟಾಕಿ ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ ಚೆಲುವೆ ಕರೀನಾ ಕಪೂರ್. ತಶಾನ್ ಸಿನಿಮಾದಲ್ಲಿ ಬಿಕಿನಿಯಲ್ಲಿ ಬಿಂದಾಸ್​ ಆಗಿ ಕುಣಿದು ರಂಗೇರಿಸಿದ ಕರೀನಾ, ಸೈಫ್ ಅಲಿಖಾನ್ ಕೈ ಹಿಡಿದು, ಅದೆಷ್ಟೋ ಅಭಿಮಾನಿಗಳಿಗೆ ಬೇಸರ ತರಿಸಿದ್ದರು. ಸದ್ಯ ಒಂದು ಮಗುವಿನ ತಾಯಿಯಾದ್ರೂ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಬೆಬೋ, ಕೊಹ್ಲಿ ಸಿಕ್ಕಾಪಟ್ಟೆ ಹಾಟ್ ಅಂತ ಹೇಳಿ ಮತ್ತೆ ಸುದ್ದಿಯಲ್ಲಿದ್ದಾಳೆ.

ವೀರೆ ದಿ ವೆಡ್ಡಿಂಗ್ ಸಿನಿಮಾ ಪ್ರಮೋಷನ್ ವೇಳೆ ಕರೀನಾ, ಕೊಹ್ಲಿಯನ್ನ ಹಾಡಿ ಹೊಗಳಿದ್ದಾಳೆ. ಸಂದರ್ಶನದ ವೇಳೆ ಕೇಳಿದ ಪ್ರಶ್ನೆ ಒಂದಕ್ಕೆ ವಿರಾಟ್ ಕೊಹ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಇದ್ದಾರೆ. ಅಷ್ಟೆ ಫಿಟ್ ಅಂಡ್ ಫೈನ್​ ಆಗಿ ಇದ್ದಾರೆ ಕರೀನಾ ಮೆಚ್ಚುಗೆಯ ಮಾತುಗಳನ್ನಾಡಿದ್ಧಾರೆ. ಹಾಲಿವುಡ್ ನಟ ಕೇನ್ ವಿಲಿಯಮ್ಸ್ ಕೂಡ ಇಷ್ಟ, ಆತ ಸಹ ಸಖತ್ ಹಾಟ್​ ಅಂತ ಹೇಳಿರೋ ಕರೀನಾ, ತನ್ನ ಪತಿ ಸೈಫ್ ಅಲಿ ಖಾನ್ ಸಹ ಫಿಟ್ನೆಸ್ ಬಗ್ಗೆ ತುಂಬಾ ಕೇರ್ ತಗೋತಾರೆ, ಅವರು ಹಾಟಾಗಿ ಇದ್ದಾರೆ ಅಂತ ನುಲಿದಿದ್ದಾಳೆ.

ಅಂದ ಹಾಗೆ ಸದ್ಯ ಕರೀನಾ ಕಪೂರ್ ವೀರೆ ದಿ ವೆಡ್ಡಿಂಗ್ ಚಿತ್ರದಲ್ಲಿ ನಟಿಸಿದ್ದು, ಜೂನ್ ಫಸ್ಟ್ ವೀಕ್ ಈ ಕಾಮಿಡಿ ಎಂಟಟ್ರೈನರ್ ತೆರೆಗೆ ಬರ್ತಿದೆ. ಶಶಾಂಕ್ ಘೋಷ್ ನಿರ್ದೇಶನದ ಈ ಚಿತ್ರದಲ್ಲಿ ಸೋನಂ ಕಪೂರ್, ಸ್ವರಾ ಭಾಸ್ಕರ್, ಏಕ್ತಾ ಕಪೂರ್ ಬಣ್ಣ ಹಚ್ಚಿದ್ದಾರೆ.

Next Story

RELATED STORIES