ಹೊಡಿಬಡಿ ಆಟಗಾರ ಡಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ

X
TV5 Kannada23 May 2018 11:39 AM GMT
ಮಿಸ್ಟರ್ 360ಡಿಗ್ರಿ ಬ್ಯಾಟ್ಸ್ಮನ್ ಎಂದೇ ಖ್ಯಾತರಾದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ 34 ವರ್ಷದ ಎಬಿ ಡಿವಿಲಿಯರ್ಸ್ ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಬುಧವಾರ ಬಿಡುಗಡೆ ಮಾಡಿದ ಡಿವಿಲಯರ್ಸ್ ನಾನು ದಣಿದಿದ್ದೇನೆ ಎಂದಿದ್ದಾರೆ.
ಇದೀಗ ಏಕದಿನ ಹಾಗೂ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೂ ಡಿವಿಲಿಯರ್ಸ್ ವಿದಾಯ ಘೋಷಿಸಿದ್ದಾರೆ. 228 ಏಕದಿನ ಪಂದ್ಯಗಳಲ್ಲಿ 53 ಅರ್ಧಶತಕ ಹಾಗೂ 25 ಶತಕ ಸೇರಿದಂತೆ 53.50ರ ಸರಾಸರಿಯಲ್ಲಿ 9577 ರನ್ ಕಲೆ ಹಾಕಿದ್ದಾರೆ. 176 ರನ್ ಬಾರಿಸಿರುವುದು ಅವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. 78 ಟಿ-20 ಪಂದ್ಯಗಳಲ್ಲಿ 26.12ರ ಸರಾಸರಿಯಲ್ಲಿ 1237 ರನ್ ಕಲೆ ಹಾಕಿದ್ದಾರೆ.
Next Story