Top

ಸೂಪರ್ ನೊವಾಸ್ಗೆ ರೋಚಕ ಗೆಲುವು

ಸೂಪರ್ ನೊವಾಸ್ಗೆ ರೋಚಕ ಗೆಲುವು
X

ಮುಂಬೈ: ಕೊನೆಯ ಎಸೆತದಲ್ಲಿ ಗೆಲ್ಲುವ ಮೂಲಕ ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ಸೂಪರ್​ ನೊವಾಸ್ ತಂಡ ಚೊಚ್ಚಲ ಮಹಿಳಾ ಐಪಿಎಲ್​ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಹಿಳಾ ಟಿ20 ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಸೂಪರ್​ ನೊವಾಸ್​ ತಂಡ ಸ್ಮೃತಿ ಮಂದಾನ ನೇತೃತ್ವದ ಟ್ರೇಲ್​ ಬ್ಲೇಸರ್ಸ್ ತಂಡವನ್ನ 3 ವಿಕೆಟ್​ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟ್ರೇಲ್​ ಬ್ಲೇಸರ್ಸ್ ನಿಗದಿತ ಓವರ್​ನಲ್ಲಿ 6ವಿಕೆಟ್ ನಷ್ಟಕ್ಕೆ 129 ರನ್​ ಗಳಿಸಿತು. ಸುಲಭ ಮೊತ್ತ ಬೆನ್ನತ್ತಿದ ಸೂಪರ್​ ನೊವಾಸ್​ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 130 ರನ್‌ಗಳಿಸಿ ಗೆಲುವು ಪಡೆಯಿತು. ಟ್ರೇಲ್​ ಬ್ಲೇಸರ್ಸ್ ಪರ 2 ವಿಕೆಟ್​ ಪಡೆದ ಸೂಜಿ ಬ್ಯಾಟ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Next Story

RELATED STORIES