Top

ಶಾಸ್ತ್ರ ಒಪ್ಪಿದರೆ ಮಾತ್ರ ಆಭರಣ ದರ್ಶನ: ಟಿಟಿಡಿ

ಶಾಸ್ತ್ರ ಒಪ್ಪಿದರೆ ಮಾತ್ರ ಆಭರಣ ದರ್ಶನ: ಟಿಟಿಡಿ
X

ಆಂಧ್ರಪ್ರದೇಶ: ತಿರುಪತಿ ತಿರುಮಲ ದೇವಸ್ಥಾನದ ಆಭರಣಗಳ ಬಗ್ಗೆ ತಕರಾರು ಎತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನೀಲ್ ಕುಮಾರ್ ಸಿಂಘಾಲ್ ಹೇಳಿಕೆಯೊಂದನ್ನ ನೀಡಿದ್ದಾರೆ. ಆಗಮ ಶಾಸ್ತ್ರದ ಒಪ್ಪಿಗೆ ಇದ್ದರೆ ಮಾತ್ರ, ದೇವಸ್ಥಾನದ ಆಡಳಿತ ಮಂಡಳಿ, ಸಾರ್ವಜನಿಕರಿಗೆ ತಿರುಪತಿಯ ಆಭರಣಗಳನ್ನು ತೋರಿಸುತ್ತದೆ ಎಂದು ಅನೀಲ್ ಕುಮಾರ್ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಂಘಾಲ್, ಆಗಮ ಶಾಸ್ತ್ರದ ಪ್ರಕಾರ ಸಾರ್ವಜನಿಕರಿಗೆ ಬಾಲಾಜಿಯ ಆಭರಣಗಳನ್ನು ತೋರಿಸುವಂತಿಲ್ಲವಾದರೆ, ಅದರ ಭಾವಚಿತ್ರವನ್ನು ಸಾರ್ವಜನಿಕರಿಗೆ ತೋರಿಸುತ್ತೇವೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ತಿರುಪತಿ ತಿರುಮಲ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತರನ್ನು ಟಿಟಿಡಿ ವರ್ಗಾವಣೆ ಮಾಡಿತ್ತು. ಈ ಕಾರಣಕ್ಕಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮಣ ದೀಕ್ಷಿತರು, ದೇವಸ್ಥಾನದಲ್ಲಿ ಬೆಲೆ ಬಾಳುವ ವಜ್ರ ಕಾಣೆಯಾಗಿದೆ ಎಂದು ಹೇಳಿಕೆ ನೀಡಿದ್ದರು.ಅಲ್ಲದೇ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದರು. ಈ ಬಗ್ಗೆ ಮಾತನಾಡಿದ ಅನೀಲ್ ಕುಮಾರ್ ಸಿಂಘಾಲ್, ಟಿಟಿಡಿ ಕಾರ್ಯಕರ್ತರು ಎಚ್ಚರಿಕೆಯಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ರಮಣ ದೀಕ್ಷಿತರ ಈ ಆರೋಪದಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.

ಇನ್ನು ರಮಣ ದೀಕ್ಷಿತರು ಆರೋಪ ಮಾಡಿರುವ ವಜ್ರವನ್ನು ಬ್ರಹ್ಮೋತ್ಸವದ ವೇಳೆ ಗರುಡ ಸೇವೆ ಪೂಜೆಗೆ ಬಳಸಲಾಗುತ್ತದೆ.ಇದನ್ನು ಮೈಸೂರು ಮಹಾರಾಜರು 1945ರಲ್ಲಿ ತಿರುಪತಿ ದೇವಸ್ಥಾನಕ್ಕೆ ದಾನ ಮಾಡಿದ್ದು, ಇದರ ಬೆಲೆ ಬರೋಬ್ಬರಿ 500 ಕೋಟಿ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮಣ ದೀಕ್ಷಿತರು, ಈ ಪ್ರಕರಣದಲ್ಲಿ ಆಂಧ್ರಪ್ರದೇಶದ ರಾಜಕಾರಣಿಗಳ ಕೈವಾಡವಿದೆ ಎಂದು ಚಂದ್ರಬಾಬು ವಿರುದ್ಧ ಆರೋಪ ಮಾಡಿದ್ದರು. ಈ ಮೂಲಕ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಗುಲಾಬಿ ಹರಳು ಮಾತ್ರವಲ್ಲದೇ, ಹಲವು ವಜ್ರಾಭರಣಗಳು ಕಾಣೆಯಾಗಿದೆ, ಅಲ್ಲದೇ ತಿರುಪತಿ ತಿರುಮಲ ದೇಗುಲದ ಪಾಕಶಾಲೆ (ಅಡುಗೆ ಮನೆ)ಯಲ್ಲಿಯೂ ಕೂಡ ಆಭರಣವನ್ನು ಮುಚ್ಚಿಡಲಾಗಿದೆ ಎಂದು ರಮಣದೀಕ್ಷಿತರು ಆರೋಪಿಸಿದ್ದಾರೆ. ಆದರೆ ದೇವಸ್ಥಾನ ಮಂಡಳಿ ಪ್ರಕಾರ, ರಮಣ ದೀಕ್ಷಿತರು ಈ ರೀತಿ ಆರೋಪಿಸಲು ಕಾರಣ ಬಿಜೆಪಿ ಪಕ್ಷ. ಏಕೆಂದರೆ ರಮಣ ದೀಕ್ಷಿತರು ಎರಡರಿಂದ ಮೂರು ಬಾರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅಮಿತ್ ಷಾ ಹೇಳಿಕೆಗಳಿಂದ ಉತ್ತೇಜಿತರಾದ ರಮಣ ದೀಕ್ಷಿತರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ.

Next Story

RELATED STORIES