Top

ಗಂಭೀರ್​ಗೆ ಟೀಂ ಇಂಡಿಯಾದಲ್ಲಿ ಚಾನ್ಸ್‌ ಕೊಡಿ : ಗಂಗೂಲಿ

ಗಂಭೀರ್​ಗೆ ಟೀಂ ಇಂಡಿಯಾದಲ್ಲಿ ಚಾನ್ಸ್‌ ಕೊಡಿ : ಗಂಗೂಲಿ
X

ನವದೆಹಲಿ : ಮುಂಬರುವ ಸರಣಿಗಳಲ್ಲಿ ಡೆಲ್ಲಿ ತಂಡದ ಎಡಗೈ ಬ್ಯಾಟ್ಸ್‌ಮನ್​ ಗೌತಮ್​ ಗಂಭೀರ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ಕೊಡಬೇಕೆಂದು ಮಾಜಿ ನಾಯಕ ಸೌರವ್​ ಗಂಗೂಲಿ ಆಯ್ಕೆ ಮಂಡಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಐಪಿಎಲ್​ ಆಡಿರುವ ಗೌತಮ್​ ಗಂಭೀರ್​ ಗೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಬೇಕು. ಅವರೊಬ್ಬ ಒಳ್ಳೆಯ ಆಟಗಾರ ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಲು ಅರ್ಹರಾಗಿದ್ದಾರೆ. ಗೌತಮ್​ ಗಂಭೀರ್ 2016ರಲ್ಲಿ ಇಂಗ್ಲೆಂಡ್​ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದರು. ಇತ್ತೀಚೆಗೆ ಡೆಲ್ಲಿ ಡೇರ್​ ಡೆವಿಲ್ಸ್ ಪರ ಆಡಿದ್ದ ಗೌತಮ್​ ಗಂಭೀರ್ 6 ಪಂದ್ಯಗಳಿಂದ 85 ರನ್​ ಬಾರಿಸಿದ್ದರು. ಟೂರ್ನಿ ಆರಂಭದಲ್ಲಿ ನಾಯಕನಾಗಿದ್ದ ಗಂಭೀರ್​ ತಂಡ ಸತತ ಸೋಲು ಕಂಡ ಕಾರಣ ನಾಯಕತ್ವ ತ್ಯಜಿಸಿದ್ದರು.

Next Story

RELATED STORIES