Top

ನಾಲ್ಕೇ ದಿನಕ್ಕೆ 4.70 ಕೋಟಿ ಬಾಚಿದ ರ‍್ಯಾಂಬೊ-2

ನಾಲ್ಕೇ ದಿನಕ್ಕೆ 4.70 ಕೋಟಿ ಬಾಚಿದ ರ‍್ಯಾಂಬೊ-2
X

ಕಳೆದ ವಾರ ತೆರೆಕಂಡ ರ‍್ಯಾಂಬೊ-2 ಸಿನಿಮಾಗೆ ರಾಜ್ಯಾದ್ಯಂತ ಎಲ್ಲಿಲ್ಲದ ಪ್ರಶಂಸೆ ಮತ್ತು ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಸಿನಿಪ್ರಿಯರಷ್ಟೇ ಅಲ್ಲ, ವಿಮರ್ಷಕರು ಕೂಡ ರ‍್ಯಾಂಬೊ ಆಟಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅದರಂತೆ ರಾಜ್ಯಾದ್ಯಂತ ಶರಣ್ ಹಾಸ್ಯದ ರಸದೌತಣ ಉಣಬಡಿಸೋದರಲ್ಲಿ ಸಕ್ಸಸ್ ಆಗಿದ್ದಾರೆ.

ಬಾಕ್ಸ್ ಆಫೀಸ್​ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ರ‍್ಯಾಂಬೊ-2, ರಿಲೀಸ್ ಆದ ನಾಲ್ಕೇ ದಿನಕ್ಕೆ 4.70 ಕೋಟಿ ಕಲೆಕ್ಷನ್ ಮಾಡಿದೆ. ಮಾಸ್ ಹೀರೋಗಳ ರೀತಿ ಬಿಗ್ ಸ್ಟಾರ್​ಗಳ ಸಿನಿಮಾಗಳಂತೆ ಶರಣ್ ಸಿನಿಮಾ ಪೈಸಾ ವಸೂಲು ಮಾಡ್ತಿರೋದು ಉದ್ಯಮ ಹುಬ್ಬೇರುವಂತೆ ಮಾಡಿದೆ.

ಶರಣ್, ಆಶಿಕಾ ರಂಗನಾಥ್, ಸಾಧು ಕೋಕಿಲಾ, ಚಿಕ್ಕಣ್ಣ ಹೀಗೆ ದೊಡ್ಡ ತಾರಾಬಳಗವಿರುವ ಈ ಚಿತ್ರದಲ್ಲಿ ಶರಣ್ ನಟನೆಯ ಜೊತೆಗೆ ಸಿನಿಮಾಗೆ ಬಂಡವಾಳ ಕೂಡ ಹಾಕಿದ್ದಾರೆ. ಲಡ್ಡು ಪ್ರೊಡಕ್ಷನ್ಸ್ ಬ್ಯಾನರ್​ನಡಿ ಶರಣ್-ತರುಣ್ ಗೆಳೆಯರ ಬಳಗ ಕೂಡಿ ಮಾಡಿರೋ ಈ ಸಿನಿಮಾದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

ಅಟ್ಲಾಂಟ ನಾಗೇಂದ್ರ ಕೂಡ ರ್ಯಾಂಬೊ 2 ಚಿತ್ರದ ಒನ್ ಆಫ್ ದ ಪ್ರೊಡ್ಯೂಸರ್ ಆಗಿದ್ದು, ಜೋಕ್ ಫಾಲ್ಸ್-ರ‍್ಯಾಂಬೊ-ರ‍್ಯಾಂಬೊ-2 ಸಿನಿಮಾಗಳ ಸಕ್ಸಸ್​ನಿಂದ ಹ್ಯಾಟ್ರಿಕ್ ನಿರ್ಮಾಪಕ ಅನಿಸಿಕೊಂಡಿದ್ದಾರೆ.

ಅದೇನೇ ಇರಲಿ, ತಂತ್ರಜ್ಞರೇ ಕೂಡಿ ಮಾಡಿರುವ ಒಂದು ಸಿನಿಮಾಗೆ ಇಷ್ಟು ದೊಡ್ಡ ಸಕ್ಸಸ್ ಸಿಕ್ಕಿರೋದು ಚಿತ್ರತಂಡಕ್ಕೆ ಎಲ್ಲಿಲ್ಲದ ಖುಷಿ ತಂದಿದೆ. ಶರಣ್ ಸಕ್ಸಸ್ ಗ್ರಾಫ್ ಕೂಡ ಹೀಗೇ ಮುಗಿಲೆತ್ತರಕ್ಕೆ ಏರಲಿ ಅಂತ ಹಾರೈಸೋಣ.

Next Story

RELATED STORIES