Top

ಕೇಂದ್ರದ 4 ವರ್ಷಗಳ ಸಾಧನಾ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಕೇಂದ್ರದ 4 ವರ್ಷಗಳ ಸಾಧನಾ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
X

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ದೆಹಲಿಯಲ್ಲಿ ಕೇಂದ್ರದಲ್ಲಿನ ಎನ್​ಡಿಎ ಸರಕಾರದ ಸಾಧನೆಗಳ ಪಟ್ಟಿ ಬಿಡುಗಡೆ ಮಾಡಿದರು.

ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದ್ದು, ಕಳೆದ ನಾಲ್ಕು ವರ್ಷಗಳ ಸಾಧನೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಸಾಧನಾ ಪಟ್ಟಿ ಬಿಡುಗಡೆ ಮಾಡಿದರು.

4 ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಅಭಿವೃದ್ಧಿಯಾಗಿದೆ. 16,850 ಹಳ್ಳಿಗಳ ಪ್ರತಿ ಮನೆಗಳಿಗೆ ವಿದ್ಯುತ್​ ಸಂಪರ್ಕ, ಎಲ್​ಪಿಜಿ ಗ್ಯಾಸ್ ಸೇವೆ ಹಾಗೂ ಇಷ್ಟು ಹಳ್ಳಿಗಳ ಮನೆಯ ಪ್ರತಿಯೊಬ್ಬರಿಗೂ ವಿಮಾ ಸೇವೆ ಒದಗಿಸಲಾಗಿದೆ. ಉಜಾಲಾ ಯೋಜನೆಯಡಿ ಎಲ್​ಇಡಿ ಬಲ್ಪ್​ಗಳನ್ನು ವಿತರಿಸಲಾಗಿದೆ ಎಂದರು.

Next Story

RELATED STORIES