Top

ಅತ್ಯಾಚಾರ ಆರೋಪಿಯಿಂದ ಧಮ್ಕಿ : ಕಾನೂನು ಕ್ರಮಕ್ಕಾಗಿ ಒತ್ತಾಯ

ಅತ್ಯಾಚಾರ ಆರೋಪಿಯಿಂದ ಧಮ್ಕಿ : ಕಾನೂನು ಕ್ರಮಕ್ಕಾಗಿ ಒತ್ತಾಯ
X

ಆನೇಕಲ್ : ಕಳೆದ 23-08-2017ರಂದು 10 ವರ್ಷದ ಬಾಲಕಿ ಮೇಲೆ 75 ವರ್ಷದ ವೃದ್ದ ನಾಗಪ್ಪ ಎಂಬುವರು ಹತ್ಯಾಚಾರ ನಡೆಸಿದ್ದರು. ಘಟನೆಯ ನಂತ್ರ, ಬಂಧನಕ್ಕೊಳಗಾಗಿದ್ದ ನಾಗಪ್ಪ, ಜೈಲು ಸೇರಿದ್ದರು. ಇದೀಗ ಬೇಲ್ ಮೇಲೆ ಬಿಡುಗಡೆಯಾಗಿರುವ ಆರೋಪಿ, ಸಾಕ್ಷಿಗಳ ನಾಶಕ್ಕೆ ತೊಡಗಿದ್ದಾರೆ ಎಂದು, ಅತ್ಯಾಚಾರಕ್ಕೆ ಒಳಗಾದ ಯುವತಿಯರು ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಬಾಲಕಿಯ ತಾಯಿ, ಕಾಮುಕ ನಾಗಪ್ಪ ನಮಗೆಲ್ಲಾ ಧಮ್ಕಿ ಹಾಕುತ್ತಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದಕ್ಕೆ, ಮುನಿಯತ್ನಮ್ಮ, ಗೌರಮ್ಮ ಎಂಬುವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗೆ ಘಟನೆ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ ಮುಚ್ಚಿ ಕುಳಿತಿರುವುದಾಗಿ ಆರೋಪಿಸಿದ್ದಾರೆ.

ಇನ್ನೂ ಮಗಳು ಅತ್ಯಾಚಾರಕ್ಕೆ ಒಳಗಾಗಿ ಆಘಾತದಲ್ಲಿದ್ದಾಳೆ. ಈ ಪರಿಸ್ಥಿತಿಯಿಂದ ಇನ್ನೂ ಚೇತರಿಸಿಕೊಳ್ಳುವ ಹಂತದಲ್ಲಿದ್ದಾಳೆ. ಆದ್ರೇ, ಆರೋಪಿ ಮಾತ್ರ ಬೇಲ್ ಮೇಲೆ ಹೊರಗೆ ಬಂದು ನಮಗೆಲ್ಲ ಧಮ್ಕಿ ಹಾಕುತಿದ್ದಾನೆ. ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥ ಅತ್ಯಾಚಾರ ಆರೋಪಿ ನಾಗಪ್ಪನ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Next Story

RELATED STORIES