ವೈರಲ್ ಆದ ಪ್ರಜ್ವಲ್, ರಾಗಿಣಿ ವೀಡಿಯೋ

X
TV5 Kannada22 May 2018 10:12 AM GMT
ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ದಂಪತಿಗಳಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿ ಚಂದ್ರನ್ ಕೂಡ ಒಂದು. ಈ ಜೋಡಿಯ ಫೋಟೋ ಆಲ್ಪಂವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಅರೆ ಇದೇನಿದು, ಯಾಕೆ? ಏನು ಆಂತ ಯೋಚನೆ ಮಾಡುತ್ತಿದ್ದೀರಾ? ವಿಷಯ ಏನಪ್ಪ ಅಂದ್ರೆ, ಇತ್ತೀಚೆಗೆ ನಡೆದ ಚಿರಂಜೀವಿ ಸರ್ಜಾ- ಮೇಘನಾ ರಾಜ್ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈ ಜೋಡಿಯ, ಖಾಸಗಿ ವೀಡಿಯೊಗ್ರಫಿ ಕಂಪನಿಯೊಂದು ಚಿಕ್ಕದೊಂದು ವಿಡಿಯೋ ಮಾಡಿದೆ. ಇನ್ನು ಈ ವೀಡಿಯೋ ಅನ್ನು ರಾಗಿಣಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಅಪ್ಲೋಡ್ ಮಾಡಿ, " ತಮ್ಮ ಮದುವೆ ಸಮಯದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿರಲಿಲ್ಲ, ಈ ವಿಡೀಯೊ ಮಾಡಿಸುವ ವೇಳೆ ತುಂಬಾನೆ ಎಂಜಾಯ್ ಮಾಡಿದ್ವಿ" ಅಂತ ಅಡಿ ಬರಹ ನೀಡಿದ್ರು.. ಈ ವೀಡಿಯೋ ನೋಡಿದ ಸಾಕಷ್ಟು ಅಭಿಮಾನಿಗಳು ಇಬ್ಬರು ಸೇರಿ ಸಿನಿಮಾ ಮಾಡಿದ್ರೆ ಚನ್ನಾಗಿರುತ್ತೆ ಅನ್ನೊ ಅಭಿಪ್ರಯಾ ವ್ಯಕ್ತ ಪಡಿಸಿದ್ದಾರೆ..
Next Story