Top

37 ಕಾರು, 5 ಟ್ರಕ್ ಧ್ವಂಸ: ಸಾಹೋಗೆ ಅತೀ ದುಬಾರಿ ಆ್ಯಕ್ಷನ್​

37 ಕಾರು, 5 ಟ್ರಕ್ ಧ್ವಂಸ: ಸಾಹೋಗೆ ಅತೀ ದುಬಾರಿ ಆ್ಯಕ್ಷನ್​
X

ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರ ಬಹುನಿರೀಕ್ಷಿತ ಸಾಹೋ ಚಿತ್ರದ ಆ್ಯಕ್ಷನ್ ಚಿತ್ರದ ಒಂದು ದೃಶ್ಯ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಆ್ಯಕ್ಷನ್ ದೃಶ್ಯ ಎಂಬ ಗೌರವಕ್ಕೆ ಪಾತ್ರವಾಗಲಿದೆ.

ಅಬುಧಾಬಿಯಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಸೋಮವಾರ ಚಿತ್ರೀಕರಣ ಪೂರ್ಣಗೊಂಡಿತು. ಕ್ಲೈಮ್ಯಾಕ್ಸ್ ಚಿತ್ರದ ದೃಶ್ಯ ಅತ್ಯಂತ ವಿಶೇಷವಾಗಿದ್ದು, ಈ ದೃಶ್ಯಕ್ಕಾಗಿಯೇ 90 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ದೃಶ್ಯವಾಗಿದೆ.

ಚಿತ್ರದಲ್ಲಿ 37 ಕಾರು ಹಾಗೂ 5 ಟ್ರಕ್ ಧ್ವಂಸಗೊಂಡಿವೆ. ಚಿತ್ರದ ಬಹುತೇಕ ಸಾಹಸ ದೃಶ್ಯಗಳು ನೈಜವಾಗಿದ್ದು, ನೋಡುಗರಿಗೆ ರೋಮಾಂಚನ ಸೃಷ್ಟಿಸಲಿದೆ. ಕಂಪ್ಯೂಟರ್ ಬಳಸಿ ದೃಶ್ಯಗಳನ್ನು ಸೃಷ್ಟಿಸಬಹುದಿತ್ತು. ಆದರೆ ನಾವು ಎಲ್ಲವನ್ನೂ ನೈಜವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ದೃಶ್ಯದ ಬಗ್ಗೆ ಪ್ರಭಾಸ್ ಹೇಳಿಕೊಂಡಿದ್ದಾರೆ.

Next Story

RELATED STORIES