Top

ಮಾನವೀಯತೆ ಮೆರೆದ ಮುಸ್ಲಿಂ ಯುವಕ

ಮಾನವೀಯತೆ ಮೆರೆದ ಮುಸ್ಲಿಂ ಯುವಕ
X

ಉತ್ತರಾಖಂಡ: ಭಾರತ ವೈವಿಧ್ಯತೆಯಲ್ಲಿ ಏಕತೆ ಕಾಣುವ ದೇಶ. ಹಿಂದು ಮುಸ್ಲಿಂ ಕ್ರಿಶ್ಚಿಯನ್ ಹೀಗೆ ಎಲ್ಲ ಧರ್ಮದವರು ಕೂಡಿ ಬಾಳುವ ಏಕೈಕ ದೇಶವೆಂದರೆ ಅದು ಭಾರತ. ಜಾತಿ ಬೇಧವಿಲ್ಲದೇ, ಸಹಬಾಳ್ವೆಯಿಂದ ಬಾಳುವ ಪದ್ಧತಿ ಭಾರತೀಯರದ್ದು. ಇದಕ್ಕೆ ಉದಾಹರಣೆಯೆಂಬಂತೆ ಘಟನೆಯೊಂದು ಜರುಗಿದೆ. ಹಿಂದು ಯುವಕನೋರ್ವನ ಜೀವ ಉಳಿಸಲು, ಮುಸ್ಲಿಂ ಯುವಕ ರಂಜಾನ್ ಉಪವಾಸವನ್ನು ಅರ್ಧಕ್ಕೆ ಕೈಬಿಟ್ಟಿದ್ದಾನೆ. ಉತ್ತರಾಖಂಡನ ಡೆಹರಾಡೂನ್ ಎಂಬಲ್ಲಿ 20 ವರ್ಷದ ಯುವಕ ಅಜಯ್ ಎಂಬಾತ ಮಾರಕ ಖಾಯಿಲೆಯಿಂದ ಬಳಲುತ್ತಿದ್ದು, ಈತನಿಗೆ ರಕ್ತದ ಕೊರತೆ ಇದ್ದ ಕಾರಣ, ಅಜಯ್ ತಂದೆ ಸಾಮಾಜಿಕ ಜಾಲತಾಣದಲ್ಲಿ ಎ ಪಾಸಿಟಿವ್ ರಕ್ತ ಬೇಕೆಂದು ಕೋರಿ ಪೋಸ್ಟ್ ಮಾಡಿದ್ದರು.

ವಾಟ್ಸಾಪ್ ನಲ್ಲಿ ಈ ಪೋಸ್ಟ್ ನ್ನು ನೋಡಿ ಆರೀಫ್ ಎಂಬ ಮುಸ್ಲಿಂ ಯುವಕ ಅಜಯ್ ಸಹಾಯಕ್ಕೆ ಮುಂದಾಗಿದ್ದಾನೆ. ಆದ್ರೆ ಆರೀಫ್ ಪವಿತ್ರ ರಂಜಾನ್ ಉಪವಾಸದಲ್ಲಿದ್ದ. ಈ ಕಾರಣಕ್ಕಾಗಿ ವೈದ್ಯರು ಆತನಿಗೆ ಮೊದಲು ಆಹಾರ ಸೇವಿಸಿ, ನಂತರ ರಕ್ತ ನೀಡಬೇಕೆಂದು ಕೇಳಿದ್ದಾರೆ. ಇದಕ್ಕೆ ಒಪ್ಪಿದ ಆರೀಫ್ ಅಜಯ್ ಜೀವ ಉಳಿಸಲು ರಂಜಾನ್ ಉಪವಾಸವನ್ನು ಅರ್ಧಕ್ಕೆ ಕೈಬಿಟ್ಟು, ಆಹಾರ ಸೇವಿಸಿ, ಅಜಯ್ ಗೆ ರಕ್ತ ನೀಡಿದ್ದಾನೆ. ಈ ಮೂಲಕ, ಜಾತಿ ಧರ್ಮಕ್ಕಿಂತ ಮಾನವೀಯತೆ ಮುಖ್ಯವಾದದ್ದು ಎಂಬುದನ್ನ ಆರೀಫ್ ಸಾಬೀತುಪಡಿಸಿದ್ದಾನೆ.

Next Story

RELATED STORIES