Top

ನಾನು ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ : ಎಂಎಲ್ ಸಿ ಶರವಣ

ನಾನು ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ : ಎಂಎಲ್ ಸಿ ಶರವಣ
X

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ನಾಳೆ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೊದಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ, ಸಚಿವ ಸ್ಥಾನಕ್ಕಾಗಿ ಭಿನ್ನಮತ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದೆ. ಕೆಲವರು ನೇರವಾಗಿ ಸಚಿವ ಸ್ಥಾನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೇ, ಮತ್ತೆ ಕೆಲವರು ಪರ್ಯಾಯವಾಗಿ ಹೇಳುತ್ತಿದ್ದಾರೆ. ಈ ಪಟ್ಟಿಯಲ್ಲಿ ಜೆಡಿಎಸ್ ಎಂ ಎಲ್ ಸಿ ಶರವಣ ಕೂಡ ಸೇರ್ಪಡೆಗೊಂಡಿದ್ದಾರೆ.

ನಗರದ ದೇವನಹಳ್ಳಿಯ ಜೆಡಿಎಸ್ ಶಾಸಕರು ತಂಗಿರುವ ರೆಸಾರ್ಟ್‌ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿ ಆಗಿರುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಬಳಿ ಹೇಳಿದ್ದೇನೆ. ಜೊತೆಗೆ ಪ್ರಮುಖ ಖಾತೆ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಇನ್ನೂ, ಆರ್ಯವೈಶ್ಯ ಜನಾಂಗದ ಒಬ್ಬನೇ ಒಬ್ಬ ಪ್ರತಿನಿಧಿ ನಾನು ಆಗಿದ್ದೇನೆ ಎಂದ ಟಿ.ಎ.ಶರವಣ, ನಮ್ಮ ಸಮುದಾಯದ ಏಳಿಗೆಗಾಗಿ ಶ್ರಮಿಸಲು, ಸಚಿವ ಸ್ಥಾನ ನೀಡುವಂತೆ ಕೋರಲಾಗಿದೆ. ಆದರೇ ಸಚಿವ ಸ್ಥಾನ ಕೊಡೋದು, ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಕೊಟ್ಟರೇ ಖುಷಿಯಾಗುತ್ತದೆ. ಕೊಡದೇ ಹೋದರೂ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ನಾಳೆ ಬಿಜೆಪಿಯವರು ಕರಾಳ ದಿನವೆಂದು ಆಚರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಂ ಎಲ್ ಸಿ ಶರವಣ, ಬಿಜೆಪಿಯವರು ಅಧಿಕಾರ ಸಿಕ್ಕಿಲ್ಲ. ದಕ್ಷಿಣ ಭಾರತದಲ್ಲಿ ಕಮಲ ಅರಳಲು ಬಿಟ್ಟಿಲ್ಲ. ಅವರ ಗೇಟ್ ಬಂದ್ ಮಾಡಿದ್ದೇವೆ. ಅವರ ಆಸೆ ಈಡೇರಿಲ್ಲ ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡ್ತಾ ಇದ್ದಾರೆ. ಅವರು ಏನೇ ಮಾಡಿದರೂ ನಮಗೇನು ತೊಂದರೆ ಇಲ್ಲ ಎಂದು ಹೇಳಿದರು.

Next Story

RELATED STORIES