Top

ಡಿಸಿಎಂ ಆಗುವ ಆಸೆ ಬಿಚ್ಚಿಟ್ಟ ಪಾಟೀಲ್

ಡಿಸಿಎಂ ಆಗುವ ಆಸೆ ಬಿಚ್ಚಿಟ್ಟ ಪಾಟೀಲ್
X

ಈ ಹಿಂದೆ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಗೆ ಈ ಬಾರಿ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಬಿ.ಪಾಟೀಲ್, 78 ಜನರೂ ಸಚಿವ ಸ್ಥಾನದ ಆಕಾಂಕ್ಷಿಗಳೇ, ಆದರೆ ಎಲ್ಲರನ್ನೂ ಮಂತ್ರಿ ಮಾಡೋಕ್ಕಾಗಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಅಲ್ಲದೇ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಡಿಸಿಎಂ ಹುದ್ದೆಯ ಆಸೆಯೂ ಇದೆ. ಅದನ್ನ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ. ಇನ್ನು ದೇವೇಗೌಡರ ಹೇಳಿಕೆ ಬಗ್ಗೆ ಮಾತನಾಡಿದ ಪಾಟೀಲ್, ಎಂ.ಬಿ.ಪಾಟೀಲ್ ಗೆ ಸಚಿವ ಸ್ಥಾನ ನೀಡಬೇಡಿ ಎಂದು ದೇವೇಗೌಡರು ಹೇಳಲಿಲ್ಲ.ಇದೊಂದು ಗಾಳಿಸುದ್ದಿಯಷ್ಟೇ, ನನಗೆ ಜಲಸಂಪನ್ಮೂಲ ಖಾತೆಯೇ ಬೆೇಕೆಂದಿಲ್ಲ. ಸಮ್ಮಿಶ್ರ ಸರ್ಕಾರ ಇರುವುದರಿಂದ ಎರಡು ಡಿಸಿಎಂ ಹುದ್ದೆ ಬೇಕಿದೆ. ದಕ್ಷಿಣಕ್ಕೆ ಪರಂ, ಡಿಕೆಶಿಗೆ ಕೊಟ್ಟರೆ. ಉತ್ತರದಲ್ಲೂ ಒಬ್ಬರಿಗೆ ಅವಕಾಶ ಮಾಡಿಕೊಡಲಿ ಎನ್ನುವ ಮೂಲಕ ಎಂ.ಬಿ.ಪಾಟೀಲ್, ಡಿಸಿಎಂ ಆಗುವ ಆಸೆಯನ್ನ ಬಿಚ್ಚಿಟ್ಟಿದ್ದಾರೆ. ಆದ್ರೆ ಶಾಮನೂರಿಗೆ ಡಿಸಿಎಂ ಪಟ್ಟ ಕೊಟ್ಟರೂ ನನಗೆ ಬೇಜಾರಿಲ್ಲ ಎನ್ನುವ ಮೂಲಕ ಎಂ.ಬಿ. ಪಾಟೀಲ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಇನ್ನು ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪಾಟೀಲ್, ಪ್ರತ್ಯೇಕತೆಯ ಕೂಗು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಚುನಾವಣೆಯೇ ಬೇರೆ, ನಮ್ಮ ಅಸ್ಮಿತೆಯೇ ಬೇರೆ. ನಾನು ಎಲ್ಲಿಯೂ ಲಿಂಗಾಯತ ಅಂತ ಟ್ರಂಪ್ ಕಾರ್ಡ್ ಬಳಸಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಮುಂದುವರಿಯಲಿದೆ. ಜಾಮದಾರ್ ಜೊತೆ ಸೇರಿ ಮುಂದುವರಿಸುತ್ತೇವೆ.ಚುನಾವಣೆ ಮುಗಿದರೂ ಅದು ನಿಲ್ಲಲ್ಲ, ಮುಂದುವರಿಯುತ್ತೆ ಎಂದು ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

Next Story

RELATED STORIES