Top

ಮೈತ್ರೀಯ ಸರ್ಕಾರಕ್ಕೆ ಉಳಿಗಾಲವಿಲ್ಲ : ಈಶ್ವರಪ್ಪ ಭವಿಷ್ಯ

ಮೈತ್ರೀಯ ಸರ್ಕಾರಕ್ಕೆ ಉಳಿಗಾಲವಿಲ್ಲ : ಈಶ್ವರಪ್ಪ ಭವಿಷ್ಯ
X

ಶಿವಮೊಗ್ಗ : ಜೆಡಿಎಸ್ -ಕಾಂಗ್ರೆಸ್ ಸರಕಾರ ಆಗೋದೇ ಡೌಟ್‌. ಆದರೂ ಉಳಿಯೋದೇ ಡೌಟ್ ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಕೆ.ಎಸ್​.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್​ ಹಾಗೂ ಕಾಂಗ್ರೆಸ್​ ನ ಅಪವಿತ್ರ ಮೈತ್ರೀಯ ಬಗ್ಗೆ ಅವರಲ್ಲೇ ಅಪಸ್ವರವಿದೆ. ಕಾಂಗ್ರೆಸ್‌ನ ಲಿಂಗಾಯತ ಶಾಸಕರು ಶಾಮನೂರು ಮನೆಯಲ್ಲಿ ಸಭೆ ನಡೆಸಿದ್ದಾರೆ. ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದಾರೆ. ಅವರಲ್ಲೇ ಭಿನ್ನಾಭಿಪ್ರಾಯವಿದೆ. ಯಾವುದೇ ಕ್ಷಣದಲ್ಲೂ ಚುನಾವಣೆ ಬರಬಹುದು. ರಾಷ್ಟಪತಿ ಆಳ್ವಿಕೆ ಹೇರಬಹುದು. ನೋಡೋಣ ಎಷ್ಟು ದಿನ ಇರುತ್ತೆ ಈ ಸರಕಾರ. ಬಿಜೆಪಿಯ ಶಾಸಕರಲ್ಲ. ಒಂದು ಹುಳಾನೂ ಆಕಡೆ ಹೋಗಲ್ಲ. ಆಕಡೆಯಿಂದ ಬರುವವರು ಸ್ವಾಭಿಮಾನಿಗಳಾಗಿ ಬರ್ತಾರೆ ಎಂದು ಈಶ್ವರಪ್ಪ ಹೇಳಿದರು.

ಜೆಡಿಎಸ್ ಪ್ರಣಾಳಿಕೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ಬಂದಿದ್ದರೇ ಮಾತ್ರ ಸಾಲ ಮನ್ನಾ ಮಾಡುತ್ತಿದ್ದೇ. ಮೈತ್ರೀ ಸರ್ಕಾರವಾದ್ಧರಿಂದ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್ಡಿಕೆ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಆಗುವ ಮುನ್ನವೇ ರೈತರಿಗೆ ಹೆಚ್ಡಿಕೆ ಮಾಡಿದ ದ್ರೋಹ ಇದು ಎಂದರು..

ಅಲ್ಲದೇ ಇದೇ ವೇಳೆ ಹಾಗದ್ರೇ ಜೆಡಿಎಸ್‌ನ ಪ್ರಣಾಳಿಕೆ ಎಲ್ಲವೂ ಬೋಗಸ್ಸಾ ಎಂದು ಪ್ರಶ್ನಿಸಿದ ಈಶ್ವರಪ್ಪ, ರೈತರ 53 ಸಾವಿರ ಕೋಟಿ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಈ ಹಿಂದೆ ಸಿದ್ದರಾಮಯ್ಯ ಲಾಟರಿ ಹೊಡೆದಂತೆ ಮುಖ್ಯಮಂತ್ರಿಯಾಗಿದ್ದರು. ಮೈತ್ರೀಯಿಂದಾಗಿ ಲಾಟರಿ ಹೊಡೆದಂತೆ ಹೆಚ್ಡಿಕೆ ಸಹ ಮುಖ್ಯಮಂತ್ರಿಯಾಗುತ್ತಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮತ್ತೋಮ್ಮೆ ರೈತವಿರೋಧಿ ಎಂದು ಸಾಬೀತಾಗುತ್ತಿದ್ದು, ರೈತದ್ರೋಹಿಗಳಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

Next Story

RELATED STORIES