Top

ಸಾಲ ವಾಪಾಸ್ ಕೊಡದಕ್ಕೆ, ಹೊಟೇಲ್ ಮಾಲೀಕ ನೇಣಿಗೆ ಶರಣು

ಸಾಲ ವಾಪಾಸ್ ಕೊಡದಕ್ಕೆ, ಹೊಟೇಲ್ ಮಾಲೀಕ ನೇಣಿಗೆ ಶರಣು
X

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಶಿವರಾಮ ಪವಾರ, ಪವನ ಸಾವಜಿ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಾ ಇದ್ದರು. ಇಂತಹ ಮಾಲೀಕರು, ತಾಲ್ಲೂಕಿನ ವಿವಿಧೆಡೆ 9.5 ಲಕ್ಷ ಸಾಲ ಕೊಟ್ಟಿದ್ದರು. ಈ ಮೊತ್ತದ ಸಾಲ ಮರಳಿ ಬಾರದ ಹಿನ್ನಲೆಯಲ್ಲಿ ಇಂದು ನೇಣಿಗೆ ಶರಣಾಗಿದ್ದಾರೆ.

ಈ ಕುರಿತು ಆತ್ಮಹತ್ಯ ಪತ್ರ ಬರೆದಿಟ್ಟಿರುವ ಶಿವರಾಮ ಪವಾರ, ಸಾಲಕೊಡಬೇಕಿದ್ದವರ ಪಟ್ಟಿಯನ್ನು ಬರೆದಿಟ್ಟಿದ್ದಾರೆ. ಅಲ್ಲದೇ ಸಾಲ ಮರಳಿ ಕೊಡದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಬ್ಯಾಡಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Next Story

RELATED STORIES