Top

ಹೆಸ್ಕಾಂ ನಿರ್ಲಕ್ಷ್ಯ, ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ

ಹೆಸ್ಕಾಂ ನಿರ್ಲಕ್ಷ್ಯ, ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ
X

ಹುಬ್ಬಳ್ಳಿ : ಹೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ಸಂಭವಿಸಿದ ಅವಘಡದಲ್ಲಿ ವ್ಯಕ್ತಿಯೋರ್ವ ತನ್ನ ಕೈ ಕಳೆದುಕೊಂಡಿದ್ದು, ಸಧ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಬ್ಬಳ್ಳಿ ತಾಲೂಕಿನ ಸಿದ್ದಪ್ಪ ನರುಗುಂದ ಎಂಬಾತನೇ ವಿದ್ಯುತ್ ಅವಘಡಕ್ಕೆ ತುತ್ತಾದ ವ್ಯಕ್ತಿ. ಸಿದ್ದಪ್ಪ ಎಪ್ರೀಲ್ 30 ರಂದು ಕಟ್ಟಿಗೆ ತರಲೆಂದು ಹೊಲಕ್ಕೆ ಹೋಗಿದ್ದರು. ಆಗ ನಿಗಧಿತ ಅಂತರಕ್ಕಿಂತ ಕೆಳಗಡೆ ಜೋತು ಬಿದ್ದಿದ್ದ, ವಿದ್ಯುತ್ ತಂತಿ ಆತನ ಕೈಗೆ ತಗುಲಿದೆ. ವಿದ್ಯುತ್ ಅವಘಡದಲ್ಲಿ ಗಂಭೀರ ಗಾಯಗೊಂಡ ಸಿದ್ದಪ್ಪನನ್ನು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಿದ್ದಾರೆ.

ಸಧ್ಯ ಹುಬ್ಬಳ್ಳಿ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಪ್ಪನ ಎಡಗೈ ಹಾಗೂ ಕಾಲಿನ ಬೆರಳುಗಳನ್ನ ಕತ್ತರಿಸಲಾಗಿದೆ. ಈ ಎಲ್ಲ ಅವಘಡಕ್ಕೆ ಹೆಸ್ಕಾಂ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ದೂರಲಾಗುತ್ತಿದೆ. ಈಗ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಸಿದ್ದಪ್ಪ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಇವರ ಕುಟುಂಬ ಈಗ ಮುಂದೇನು ಎಂಬ ಪರಿಸ್ಥಿತಿಗೆ ಬಂದು ನಿಂತಿದೆ.

Next Story

RELATED STORIES