Top

ದೀಪಿಕಾಗೆ ಕೆಲಸ ಇಲ್ಲದೇ ಕೈಕಟ್ಟಿ ಕೂತಿರೋದು ಯಾಕೆ?

ದೀಪಿಕಾಗೆ ಕೆಲಸ ಇಲ್ಲದೇ ಕೈಕಟ್ಟಿ ಕೂತಿರೋದು ಯಾಕೆ?
X

ಈ ವರ್ಷದ ಬಾಲಿವುಡ್​ನಾ ಬಿಗ್ ಸೂಪರ್ ಡೂಪರ್ ಹಿಟ್ ಸಿನಿಮಾ ಪದ್ಮಾವತ್​. ಈ ಚಿತ್ರದಲ್ಲಿ ದೀಪಿಕಾ ಅದ್ಭುತ , ಅನನ್ಯ, ಅಮೋಘ. ದೀಪಿಕಾ ‘ಪದ್ಮಾವತ್’ ಚಿತ್ರದ ನಂತರ ಮುಗಿಲೆತ್ತರಕ್ಕೆ ಬೆಳೆದು, ಭಾರಿ ಬೇಡಿಕೆಯ ನಟಿಯಾಗಿ ಬಿಡ್ತಾರೆ ಎಂದು ಬಿಟೌನ್ ಪಂಡಿತರು ಲೆಕ್ಕಾಚಾರ ಮಾಡಿದ್ರು. ಆದ್ರೆ ಅದೆಲ್ಲಾ ಉಲ್ಟಾ ಆಯ್ತು. ಇದೀಗ ಡಿಪ್ಪಿ ಫುಲ್​ ಫ್ರೀ. ಕೆಲಸ ಇಲ್ಲದೆ ಮನೆಯಲ್ಲಿ ಕೈಕಟ್ಟಿ ಕೂತಿದ್ದಾರೆ.ಇದು ಸತ್ಯ.. ದೀಪಿಕಾ ಪಡುಕೋಣೆ, ‘ಪದ್ಮಾವತ್’​ ಚಿತ್ರದ ನಂತರ ಯಾವ ಹೊಸ ಪ್ರಾಜೆಕ್ಟ್​​​ಗೂ ಸೈನ್ ಮಾಡಿಲ್ಲ.. ಇರ್ಫಾನ್ ಖಾನ್ ಅನಾರೋಗ್ಯಕ್ಕೆ ತುತ್ತಾಗಿದ್ರಿಂದ, ಅವ್ರ ಜೊತೆ ನಟಿಸ್ಬೇಕಿದ್ದ ಸಿನಿಮಾ ಒಂದು ಡ್ರಾಪ್ ಆಗಿದೆ.. ಜೊತೆಗೆ ದೀಪಿಕಾ ಸಂಭಾವನೆ ಈಗ ಮುಗಿಲೆತ್ತರಕ್ಕೆ ಏರಿರೋದ್ರಿಂದ ಯಾವ್ದು ಹೊಸ ಆಫರ್​​ಗಳು ಬರುತ್ತಿಲ್ಲವಂತೆ.

ಇದೆಲ್ಲದರ ನಡುವೆ ದೀಪಿಕಾ ಈ ವರ್ಷವೇ ಮದುವೆ ಆಗುವ ಯೋಜನೆಯಲ್ಲಿರುವುದರಿಂದ ಸದ್ಯ ಆಕೆಯ ಅಕೌಂಟ್​​ನಲ್ಲಿ ಯಾವುದೇ ಸಿನಿಮಾ ಇಲ್ಲ. ಈ ಎಲ್ಲಾ ವಿದ್ಯಮಾನಗಳಿಂದ ಪದ್ಮಾವತಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಅದಷ್ಟು ಬೇಗ ನಮ್ಮ ಕನ್ನಡತಿ ಹೊಸ ಸಿನಿಮಾಗಳಲ್ಲಿ ನಟಿಸಲಿ ಅನ್ನೋದು ಚಿತ್ರರಸಿಕರ ಆಶಯ.

Next Story

RELATED STORIES