Top

ಶ್ಯಾಮನೂರ್‌ಗೆ ಡಿಸಿಎಂ ಸ್ಥಾನ ನೀಡಿ : ವೀರಶೈವ ಮಹಾಸಭಾ ಆಗ್ರಹ

ಶ್ಯಾಮನೂರ್‌ಗೆ ಡಿಸಿಎಂ ಸ್ಥಾನ ನೀಡಿ : ವೀರಶೈವ ಮಹಾಸಭಾ ಆಗ್ರಹ
X

ದಾವಣಗೆರೆ : ಮಾಜಿ ಸಚಿವ, ಹಾಲಿ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಉಪಮುಖ್ಯ ಮಂತ್ರಿ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆಗ್ರಹಿಸಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮೀಶ್ರ ಸರ್ಕಾರದಲ್ಲಿ ಶಾಸಕರಲ್ಲಿ ಹಿರಿಯರು ಹಾಗು ವೀರಶೈವ ಮುಖಂಡರು ಆದಂತಹ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯ ಮಂತ್ರಿ ಉದ್ದೆಯನ್ನು ನೀಡಬೇಕೆಂದು ನಿಯೋಜಿತ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಮಹಾಸಭಾ ಒತ್ತಾಯಿಸಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಶಾಮನೂರು ಶಿವಶಂಕರಪ್ಪ ರಿಗೆ ಯಾವುದೇ ಖಾತೆಯನ್ನು ನೀಡಿದ್ದರೂ ಸಮರ್ಥವಾಗಿ ನಿಭಾಯುಸುತ್ತಾರೆ ಹಾಗಾಗಿ ಇವರಿಗೆ ಸಚಿವ ಸಂಪುಟದದಲ್ಲಿ ಸೂಕ್ತ ಸ್ಥಾನ ಮಾನನೀಡಬೇಕೆಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಒಂದು ವೇಳೆ ಶಾಮನೂರು ಶಿವಶಂಕರಪ್ಪಗೆ, ಡಿಸಿಎಂ ಸ್ಥಾನ ನೀಡದೇ ಹೋದರೇ, ವೀರಶೈವ ಸಮಾಜದ ವತಿಯಿಂದ ಪ್ರತಿಭಟನೆ ಹಾಗೂ ರಾಜ್ಯಾದ್ಯಂತ ಹೋರಾಟವನ್ನು ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Next Story

RELATED STORIES