Top

ಕಾಂಗ್ರೆಸ್ ಸೋಲಿಗೆ ಮುದ್ದಹನುಮೇಗೌಡ ಕಾರಣ : ಸುರೇಶ್ ಗೌಡ

ಕಾಂಗ್ರೆಸ್ ಸೋಲಿಗೆ ಮುದ್ದಹನುಮೇಗೌಡ ಕಾರಣ : ಸುರೇಶ್ ಗೌಡ
X

ತುಮಕೂರು : ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಲು ಸಂಸದ ಮುದ್ದಹನುಮೇಗೌಡರೇ ಕಾರಣ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸಂಸದ ಮುದ್ದಹನುಮೇಗೌಡರು ಕಾಂಗ್ರೆಸನಲ್ಲಿದ್ದು ಕೊಂಡೇ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ ಎಂದು ಸುರೇಶ್ ಗೌಡ ಬಾಂಬ್ ಸಿಡಿಸಿದ್ದಾರೆ. ಕೆಲವೆಡೆ ಕಾಂಗ್ರೆಸ್ ನಿಂದ ದುರ್ಬಲ ಅಭ್ಯರ್ಥಿಗಳ ನ್ನು ಕಣಕ್ಕಿಳಿಸಿ ಜೆಡಿಎಸ್ ಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಸೋಲಿಗೂ ಮುದ್ದಹನುಮೇಗೌಡರೇ ಕಾರಣ ಎಂದು ಆಪಾದಿಸಿದರು.

ಅಲ್ಲದೇ ಮುದ್ದಹನುಮೇಗೌಡರು ಮಧುಗಿರಿಗೆ ಹೋಗಿ ಒಕ್ಕಲಿಗ ಸಮುದಾಯದವರಲ್ಲಿ ರಾಜಣ್ಣ ಪರ ಮತಯಾಚನೆ ಮಾಡಿದ್ರೆ ರಾಜಣ್ಣ ಗೆಲ್ಲುತಿದ್ದರು. ಆದ್ರೆ ಹಾಗೆ ಮಾಡಲಿಲ್ಲ. ರಾಜಣ್ಣ ಗೆಲ್ಲುವುದು ಮುದ್ದಹನುಮೇಗೌಡರಿಗೆ ಬೇಕಿರಲಿಲ್ಲ. ಬದಲಾಗಿ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಗೆಲ್ಲೋದು ಬೇಕಿತ್ತು ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕೇವಲ ಮೂರು ಸ್ಥಾನಕ್ಕೆ ಕುಸಿಯಲು ಸಂಸದ ಮುದ್ದಹನುಮೇಗೌಡರೇ ಕಾರಣ ಎಂದು ಸುರೇಶ್ ಗೌಡ ವಿವಾದಿತ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ತುಮಕೂಕಿನ ರಾಜಕೀಯ ನಡೆಯತ್ತ ಎಲ್ಲರೂ ಕಣ್ಣಾಯಿಸುವಂತೆ ಮಾಡಿದ್ದಾರೆ.

Next Story

RELATED STORIES