Top

ಮಕ್ಕಳ ಕಳ್ಳರೆಂದು ನಾಲ್ವರಿಗೆ ಥಳಿತ

ಮಕ್ಕಳ ಕಳ್ಳರೆಂದು ನಾಲ್ವರಿಗೆ ಥಳಿತ
X

ವಿಜಯಪುರ : ರಾಜ್ಯದಲ್ಲಿ ದಿನೇ ದಿನೇ ಮಕ್ಕಳ ಕಳ್ಳರ ಹಾವಳಿ ಇದೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ಹಳ್ಳಿಗಳಲ್ಲಿ ಮಕ್ಕಳ ಕಳ್ಳರಿಗಾಗಿ ಗ್ರಾಮಸ್ಥರು ಸರದಿ ಸಾಲಿನಲ್ಲಿ ರಾತ್ರಿ ಕಾವಲು ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಹಳ್ಳಿಗಳಿಗೆ, ಪಟ್ಟಣಗಳಿಗೆ ಹೊಸದಾಗಿ ಬರುವ ಅಮಾಯಕರನ್ನು, ಮಕ್ಕಳ ಕಳ್ಳರೆಂದು ಭಾವಿಸಿ ಥಳಿಸುತ್ತಿರುವ ಘಟನೆ ಹೆಗ್ಗಿಲ್ಲದ್ದೇ ಅಲ್ಲಲ್ಲಿ ನಡೆಯುತ್ತಿದೆ.

ಇದೇ ರೀತಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ನಾಲ್ವರು ಕಳ್ಳರ ಕೈ ಕಾಲು ಕಟ್ಟಿ ಹಾಕಿ ಥಳಿಸಿದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ‌ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಹಲವು ದಿನಗಳ ಹಿಂದಷ್ಟೇ ಸರಣಿ ಮನೆಗಳ ಕಳ್ಳತನವಾಗಿತ್ತು. ಇದರಿಂದ‌ ಎಚ್ಚೆತ್ತುಕೊಂಡಿದ್ದ ಗ್ರಾಮಸ್ಥರು ನಿನ್ನೆ ರಾತ್ರಿ ಕಾರ್ ಹಾಗೂ ಬೇರೆ ವಾಹನದಲ್ಲಿ ಅನುಮಾಸ್ಪದನಾಗಿ ತಿರುಗಾಡುತ್ತಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಕದೀಮರ ವಾಹನ ತಡೆದು ವಿಚಾರಣೆ ನಡೆಸಿದ್ದಾರೆ.

ಇನ್ನು ಕಳ್ಳರು ಮಕ್ಕಳ ಕಳ್ಳತನ ಮಾಡಲು ಬಂದಿದ್ದಾರೆಂದು, ಅಮಾಯಕರನ್ನು ಕೈ ಕಾಲು ಕಟ್ಟಿ ಹಾಕಿ ಚಿಕ್ಕರೂಗಿ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಎಂಟು ಜನರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಕಳ್ಳರ ಕಾರಿನಲ್ಲಿ ಮಚ್ಚುಗಳು ಹಾಗೂ ಮಾರಕಾಸ್ತ್ರ ಪತ್ತೆಯಾಗಿದ್ದು, ಕಳ್ಳರು ಎಲ್ಲಿಯವರು ಯಾಕೆ ಬಂದಿದ್ದರು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕು. ಈ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES