Top

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೇಳಿಬಂತು ಗುಂಡಿನ ಮೊರೆತ

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೇಳಿಬಂತು ಗುಂಡಿನ ಮೊರೆತ
X

ಬೆಂಗಳೂರು:ಹಾಡುಹಗಲೇ ದುಷ್ಕರ್ಮಿಗಳು ಫರ್ನೀಚರ್ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಫ್ರೆಜರ್ ಟೌನ್ ನಲ್ಲಿ ನಡೆದಿದೆ..ಪಿಠೋಪಕರಣ ಮಾರಾಟ ಮಳಿಗೆ ಮಾಲೀಕ ಫ್ರೇಜರ್ ಟೌನ್‌ನ ಮಸೂದ್ ಅಲಿ(62) ಗಾಯಗೊಂಡಿರುವ ಅಂಗಡಿ ಮಾಲೀಕನಾಗಿದ್ದು, ನಿನ್ನೆ ಬೆಳಗ್ಗೆ 11-30 ರ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಪುಲಿಕೇಶಿನಗರದಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪುಲಿಕೇಶಿನಗರದಲ್ಲಿ ಪೀಠೋಪಕರಣ ಮಾರಾಟ ಮಳಿಗೆ ಹೊಂದಿದ್ದಾನೆ.. ಮಸೂದ್, ಮಧ್ಯಾಹ್ನ 11-30ರ ಸುಮಾರಿಗೆ ಕಾರಿನಲ್ಲಿ ಫ್ರೆಜರ್ ಟೌನ್ ಮಳಿಗೆಗೆ ತೆರಳುತ್ತಿದ್ದರು. ಈ ವೇಳೆ ಹಿಂದೆಯಿಂದ ಸ್ಯಾಂಟ್ರೋ ಕಾರಿನಲ್ಲಿ ಬರುತ್ತಿದ್ದ ಇಬ್ಬರು ದುಷ್ಕರ್ಮಿಗಳು ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಪರಸ್ಪರ ಮಸೂದ್ ಜೊತೆ ಮಾತಿನ‌ ಚಕಮಕಿ ನಡೆದಿದೆ. ಮಾತಿನ ಚಕಮಕಿ ವೇಳೆ ದುಷ್ಕರ್ಮಿಗಳು ಮಸೂದ್ ಮೇಲೆ 1 ಸುತ್ತು ಗುಂಡು ಹಾರಿಸಿದ್ದಾರೆ..ಗುಂಡು ಮಸೂದ್ ಬೆನ್ನಿಗೆ ತಗುಲಿ ಸಣ್ಣ ಗಾಯವಾಗಿದೆ.. ಆಗಿನ ಚೀರಾಟ ಕೇಳಿ ಸ್ಥಳೀಯರು ಜಮಾಯಿಸುತ್ತಿದಂತೆ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ.. ಕೂಡಲೆ ಮಸೂದ್‌ನನ್ನು ಸಮೀಪದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ನೀಡಲಾಗುತ್ತಿದೆ. ಪೀಠೋಪಕರಣ ಮಾರಾಟ ಹಾಗೂ ಒಳಾಂಗಣ ವಿನ್ಯಾಸ ಉದ್ದಿಮೆದಾರರಾದ ಮಸೂದ್ ಅಲಿ ಹಣಕಾಸು ವಿಚಾರಕ್ಕೆ ಕೆಲವರ ಜತೆ ಮನಸ್ತಾಪ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಗುಂಡಿನ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ..ಈ ಕುರಿತು ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತನಿಖೆ ಮುಂದುವರೆದಿದೆ..

Next Story

RELATED STORIES