Top

ಸ್ಟೆರ್​ಲೈಟ್ ಉದ್ಯಮಕ್ಕೆ ವಿರೋಧ: ಗುಂಡಿಗೆ 9 ರೈತರ ಬಲಿ

ಸ್ಟೆರ್​ಲೈಟ್ ಉದ್ಯಮಕ್ಕೆ ವಿರೋಧ: ಗುಂಡಿಗೆ 9  ರೈತರ ಬಲಿ
X

ಸ್ಟೆರ್​ಲೈಟ್​ ಉದ್ಯಮ ಸ್ಥಾಪನೆಗೆ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 9 ರೈತರು ಮೃತಪಟ್ಟಿದ್ದಾರೆ.

ತಮಿಳುನಾಡಿನ ತೂತುಕೂಡಿಯಲ್ಲಿ ಸ್ಟೆರ್​ಲೈಟ್ ಕಂಪನಿ ಸ್ಥಾಪನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಮಂಗಳವಾರ ನಿಷೇಧಾಜ್ಞೆ ವಿಧಿಸಿದ್ದರೂ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದರು.

ಪೊಲೀಸರು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Next Story

RELATED STORIES