ಕೊನೆಗೂ ಬಣ್ಣ ಹಚ್ಚಿದ ಅಮಿತಾಬ್ ಬಚ್ಚನ್ ಪುತ್ರಿ!

ಬಿಗ್ ಬಿ ಅಮಿತಾಬ್ ಬಚ್ಚನ್ ಫ್ಯಾಮಿಲಿಯಿಂದ ಮತ್ತೊಬ್ಬರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ. ಬಿಗ್ ಬಿ ಪುತ್ರಿ ಶ್ವೇತಾ ಬಚ್ಚನ್!
ತಂದೆಯ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಅಭಿಶೇಕ್ ಬಚ್ಚನ್, ಸದ್ಯ ಬಾಲಿವುಡ್ನಲ್ಲಿ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಅಮಿತಾಬ್ ಪತ್ನಿ ಜಯಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಕೂಡ ಚಿತ್ರರಸಿಕರಿಗೆ ಚಿರಪರಿಚಿತ. ಇದೀಗ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ನಂದಾ ಕ್ಯಾಮೆರಾ ಮುಂದೆ ದರ್ಶನ ಕೊಟ್ಟಿದ್ದಾರೆ.
ಕಲ್ಯಾಣ್ ಜ್ಯುವೆಲರ್ಸ್ ಜಾಹೀರಾತಿನಲ್ಲಿ ಬಿಗ್ ಜೊತೆ ಪುತ್ರಿ ಶ್ವೇತಾ ಬಚ್ಚನ್ ನಂದಾ ಕಾಣಿಸಿಕೊಂಡಿದ್ದಾರೆ. ಈ ವಿಚಾರವನ್ನ ಸ್ವತ: ಅಮಿತಾಬ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಫ್ಯಾಮಿಲಿಯಲ್ಲೇ ಹುಟ್ಟಿ ಬೆಳೆದ ಶ್ವೇತಾ ಎಂದೂ ಚಿತ್ರರಂಗಕ್ಕೆ ಬರೋ ಮನಸ್ಸು ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಜಾಹೀರಾತಿಗಾಗಿ ಅವರು ಕ್ಯಾಮೆರಾ ಎದುರಿಸಿದ್ದಾರೆ. ತಂದೆ ಮಗಳ ಆ್ಯಡ್ ಮೇಕಿಂಗ್ ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.
2012ರಿಂದಲೂ ಅಮಿತಾಬ್ ಕಲ್ಯಾಣ್ ಜ್ಯುವೆಲರ್ಸ್ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಸಂಸ್ಥೆಯ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸ್ತಾ ಬರ್ತಿದ್ದಾರೆ. ಅದೆಲ್ಲಕ್ಕಿಂತ ಪುತ್ರಿ ಜೊತೆ ಕಾಣಿಸಿಕೊಂಡಿರೋ ಹೊಸ ಆ್ಯಡ್ ತುಂಬಾ ಸ್ಪೆಷಲ್ ಅಂತಿದ್ದಾರೆ ಬಿಗ್ ಬಿ. ಶ್ವೇತಾ ಬಚ್ಚನ್ ಬರಹಗಾರ್ತಿಯಾಗಿಯೂ ಪರಿಚಿತರಾಗಿದ್ದಾರೆ. ಕೆಲ ದಿನಗಳ ಹಿಂದೆ ಕೋಸ್ಲಾ ಜಾನಿ ಇಂಟರ್ನ್ಯಾಷನಲ್ ಶೋನಲ್ಲಿ ಶ್ವೇತಾ ಱಂಪ್ ಮೇಲೆ ಹೆಜ್ಜೆ ಹಾಕಿದ್ದರು.