Top

ಅಂಬಿ ಕೇರಳ ಫ್ಲೈಟ್ ಹತ್ತಿದ್ಯಾಕೆ ಗೊತ್ತಾ..?

ಅಂಬಿ ಕೇರಳ ಫ್ಲೈಟ್ ಹತ್ತಿದ್ಯಾಕೆ ಗೊತ್ತಾ..?
X

ಬಹಳ ವರ್ಷಗಳ ನಂತr ರೆಬಲ್ ಸ್ಟಾರ್ ಅಂಬರೀಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೋ. ಗುರುದತ್​ ಗಾಣಿಗ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಕೊನೆ ಹಂತ ತಲುಪಿದೆ.

ಅಂಬಿ-ಸುದೀಪ್ ನಟಿಸಿರುವ ಈ ಸಿನಿಮಾ ತೆರೆಗೆ ಬರೋಕೆ ದಿನಗಣನೆ ಶುರುವಾಗಿದೆ. ಈ ಚಿತ್ರದಲ್ಲಿ ಅಂಬಿ ರಿಟೈರ್ಡ್ ಫೈಟ್ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಎಕ್ಸ್ ಸ್ಟಂಟ್ ಮಾಸ್ಟರ್ ಒಬ್ಬರ ಕಥೆ ಹೇಗಿರುತ್ತೆ ಅನ್ನೋ ರೀತಿಯಲ್ಲಿ ಈ ಪಾತ್ರವನ್ನ ಡಿಸೈನ್ ಮಾಡಿದ್ದಾರೆ ನಿರ್ದೇಶಕರು.ಕೇರಳದಲ್ಲಿ ಒಂದಷ್ಟು ದೃಶ್ಯಗಳ ಜೊತೆಗೆ ಅಂಬಿ-ಸುಹಾಸಿನಿ ನಡುವಿನ ಒಂದು ಮಾಂಟೇಜ್​​ ಸಾಂಗ್​​ನ ಶೂಟ್ ಮಾಡಲಾಗುತ್ತೆ.

ನಿರ್ಮಾಪಕ ಜಾಕ್ ಮಂಜು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮತ್ತು ಅಂಬಿ ಈಗಾಗಲೇ ಕೇರಳದ ವಿಮಾನ ಏರಿದ್ದಾರೆ.. ಶೀಘ್ರದಲ್ಲೇ ಇನ್ನುಳಿದ ತಂಡ ಕೇರಳ ಸೇರಿಕೊಳ್ಳಲಿದ್ದು, ಆದಷ್ಟು ಬೇಗ ಶೂಟಿಂಗ್ ಮುಗಿಸೋ ಪ್ರಯತ್ನದಲ್ಲಿದೆ ಚಿತ್ರತಂಡ. ಅಂಬಿ ಹುಟ್ಟುಹಬ್ಬ ಅಂದ್ರೆ ಮೇ 29ಕ್ಕೆ ಅಂಬಿ ನಿಂಗೆ ವಯಸ್ಸಾಯ್ತೋ ಟ್ರೈಲರ್​ ರಿಲೀಸ್​ ಆಗಲಿದೆ.

Next Story

RELATED STORIES