Top

ಆ್ಯಮಿ ಜಾಕ್ಸನ್​​ಗೆ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ವಾಯ್ಸ್..!

ಆ್ಯಮಿ ಜಾಕ್ಸನ್​​ಗೆ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ವಾಯ್ಸ್..!
X

ಬಹಳ ವರ್ಷಗಳ ನಂತರ ಕ್ರೇಜಿ ಕ್ವೀನ್ ರಕ್ಷಿತಾ ಸಿಲ್ವರ್​ ಸ್ಕ್ರೀನ್​ಗೆ ವಾಪಸ್ ಆಗ್ತಿದ್ದಾರೆ. ಹಾಗಂತ ರಕ್ಷಿತಾ ಯಾವುದೇ ಹೊಸ ಚಿತ್ರದಲ್ಲಿ ನಟಿಸ್ತಿಲ್ಲ. ಬದಲಿಗೆ ದಿ ವಿಲನ್ ಚಿತ್ರದಲ್ಲಿ ಆ್ಯಮಿ ಜಾಕ್ಸನ್​ ಪಾತ್ರಕ್ಕೆ ಧ್ವನಿ ನೀಡ್ತಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿರೋ ಪ್ರೇಮ್, ಚಿತ್ರದ ಡಬ್ಬಿಂಗ್​ಗೆ ಚಾಲನೆ ಕೊಟ್ಟಿದ್ದಾರೆ. ಒಂದಷ್ಟು ಕಂಠದಾನ ಕಲಾವಿದರ ಧ್ವನಿ ಟೆಸ್ಟ್ ಮಾಡಿದ್ದ ಪ್ರೇಮ್‍ಗೆ, ಅದ್ಯಾವುದೂ ಇಷ್ಟವಾಗದೆ ಕೊನೆಗೆ ಓಕೆಯಾಗಿದ್ದು ರಕ್ಷಿತಾ ಅವರ ಧ್ವನಿ ಅಂತೆ.

ದಿ ವಿಲನ್ ಚಿತ್ರದಲ್ಲಿ ಆ್ಯಮಿ ಜಾಕ್ಸನ್​ಗೆ ಡಬ್ಬಿಂಗ್ ಹೇಳೊ ಮೂಲಕ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ ರಕ್ಷಿತಾ ಪ್ರೇಮ್. ತಮ್ಮ ಪಾತ್ರಗಳಿಗೆ ತಾವೇ ಡಬ್ ಮಾಡ್ತಿದ್ದ ಕ್ರೇಜಿ ಕ್ವೀನ್, ಮೊದಲ ಬಾರಿಗೆ ಮತ್ತೊಬ್ಬರಿಗೆ ಡಬ್ ಮಾಡ್ತಿರೋದಕ್ಕೆ ಎಕ್ಸೈಟ್ ಆಗಿದ್ದಾರೆ. ಡಬ್ಬಿಂಗ್ ಸ್ಟುಡಿಯೋದ ಆನಂದ್, ನಿರ್ದೇಶಕ ಮಹೇಶ್ ಬಾಬು ಆ್ಯಮಿ ಜಾಕ್ಸನ್ ಪಾತ್ರಕ್ಕೆ ರಕ್ಷಿತಾ ಅವ್ರ ಪಾತ್ರ ಚೆನ್ನಾಗಿರುತ್ತೆ ಅಂತ ಸೂಚಿಸಿದರಂತೆ.

ಒಟ್ಟಾರೆ ಪ್ರೇಮ್​ ನಿರ್ದೇಶನದಲ್ಲಿ ಸುದೀಪ್, ಶಿವಣ್ಣ ನಟಿಸ್ತಿರೋ ಈ ಮಲ್ಟಿಸ್ಟಾರರ್ ಚಿತ್ರಕ್ಕೆ ರಕ್ಷಿತಾ ಪ್ರೇಮ್​ ಆಗಮನದಿಂದ ಮತ್ತಷ್ಟು ಬಲ ಬಂದಂತಾಗಿದೆ. ಸದ್ಯ ಕಿರುತೆರೆಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಬ್ಯುಸಿಯಾಗಿರೋ ರಕ್ಷಿತಾ ಮತ್ತೆ ಸ್ಯಾಂಡಲ್​ವುಡ್​ ಕಡೆ ಮುಖ ಮಾಡಿರೋದು ಅವ್ರ ಅಭಿಮಾನಿಗಳಿಗೆ ಸಂತಸ ತಂದಿದೆ.

Next Story

RELATED STORIES