Top

ಮೃತ ಕಾರ್ಯಕರ್ತ ಚನ್ನಬಸಪ್ಪ ಮನೆಗೆ ಯಡಿಯೂರಪ್ಪ ಭೇಟಿ, ಸಾಂತ್ವಾನ

ಮೃತ ಕಾರ್ಯಕರ್ತ ಚನ್ನಬಸಪ್ಪ ಮನೆಗೆ ಯಡಿಯೂರಪ್ಪ ಭೇಟಿ, ಸಾಂತ್ವಾನ
X

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಹುಣಸೇಮರದ ಚನ್ನಬಸಪ್ಪ, ಬಿಜೆಪಿ ನಿಷ್ಟಾವಂತಾ ಕಾರ್ಯಕರ್ತರ. ಅಷ್ಟೇ ಅಲ್ಲದೇ ಯಡಿಯೂರಪ್ಪನವರ ಕಟ್ಟಾ ಅಭಿಮಾನಿ. ಯಡಿಯೂರಪ್ಪ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಸಿಎಂ ಆಗೀ ಆಧಿಕಾರ ಸ್ವೀಕರಿಸಿದಾಗ ಅವರಷ್ಟು ಸಂಭ್ರಮಿಸಿದವರು ಯಾರೂ ಕೂಡ ಇರಲಿಲ್ಲಾ.

ಆದರೇ ಮೊನ್ನೆ ಯಡಿಯೂರಪ್ಪ ಬಹುಮತ ಸಾಬೀತು ಮಾಡದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡ ಬೇಕಾಯಿತು. ಇದನ್ನು ಕಂಡು ಬಾವುಕರಾದ ಚನ್ನಬಸಪ್ಪ, ಯಡಿಯಯೂರಪ್ಪರ ಕೊನೆ ಭಾಷಣವನ್ನು ಕೇಳುತ್ತಿದ್ದಂತೆ ಮನೆಯಲ್ಲಿ ತೀರ್ವ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಇಂದು ಹೆಲಿಕ್ಯಾಪ್ಟರ್ ಮೂಲಕ ಸಂತೇಬೆನ್ನೂರಿಗೆ ಆಗಮಿಸಿದ ಯಡಿಯೂರಪ್ಪ ಮೃತ ಚನ್ನಬಸಪ್ಪ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ, ಚನ್ನಬಸಪ್ಪನವರ ಭಾವ ಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು.

ಯಡ್ಯೂರಪ್ಪ ಚನ್ನಬಸಪ್ಪ ಕುಟುಂಬದವರಿಗೆ ಸಾಂತ್ವಾನ ಹೇಳಲು ಮನೆಗೆ ಬರುತ್ತಿದ್ದಂತೆ ಚನ್ನಬಸಪ್ಪನವರ ಕುಟಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಆದರೂ ಯಡ್ಯೂರಪ್ಪ ಕುಟುಂಬಸ್ಥರಿಗೆ ದೈರ್ಯ ತುಂಬಿದರಲ್ಲದೇ. ದೇವರು ಅವರ ಕುಟುಂಬಕ್ಕೆ ದುಖ ಬರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಇದೇ ವೇಳೆ ಮಾತನಾಡಿದ ಯಡ್ಯೂರಪ್ಪ, ರಾಜ್ಯದ ಜನರು ಯಾರೂ ಕೂಡ ದೃತಿ ಗೆಡುವುದು ಬೇಡ. ಯಾರೂ ಕೂಡ ಕೆಟ್ಟ ನಿರ್ಧಾರ ಕೈಗೊಳ್ಳ ಬೇಡಿ. ಮುಂದೇ ಯಾವಾಗಲೇ ಚುನಾವಣೆ ಬಂದರೂ ಬಿಜೆಪಿ 150 ಸೀಟು ಗೆಲ್ಲುವುದು ಶತ ಸಿದ್ದ ಎಂದು ಮನವಿ ಮಾಡಿದರು. ಇನ್ನೂ ಚನ್ನಬಸಪ್ಪ ಪತ್ನಿ ಹಾಗೂ ಮಕ್ಕಳು ಯಡ್ಯೂರಪ್ಪ ಇನ್ನು ಆರು ತಿಂಗಳಲ್ಲಿ ಮತ್ತೆ ಸಿಎಂ ಆಗೀ ಅಧಿಕಾರಿಕರ ವಹಿಸಿಕೊಳ್ಳ ಬೇಕು ಆಗಿದ್ದಾಗ ಮಾತ್ರ ಚನ್ನಬಸಪ್ಪನವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದರು.

ಯಡಿಯೂರಪ್ಪ ಚನ್ನಬಸಪ್ಪನವರ ಮನೆ ಬಳಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಯಡಿಯೂರಪ್ಪರಿಗೆ ಘೋಷಣೆ ಹಾಕಿದರಲ್ಲದೇ ಅವರೇ ಮುಂದಿನ ಸಿಎಂ ಎಂದು ಘೋಷಣೆ ಕೂಗಿದರು. ಏನೇ ಆಗಲೀ ಯಡಿಯೂರಪ್ಪರಿಗೆ ಸಿಎಂ ಸ್ಥಾನ ಕೈತಪ್ಪಿದ್ದು ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿರುವುದಂತೂ ಸತ್ಯ.

Next Story

RELATED STORIES