Top

ಭೀಕರ ಅಪಘಾತ, 7 ಮಂದಿ ದುರ್ಮರಣ

ಭೀಕರ ಅಪಘಾತ, 7 ಮಂದಿ ದುರ್ಮರಣ
X

ತುಮಕೂರು: ಶಿರಾ ಬಳಿ ಭೀಕರ ಅಪಘಾತ ಸಂಭವಿಸಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಹಿಂಬದಿಯಿಂದ ಬಂದ ಖಾಸಗಿ ಬಸ್ ಲಾರಿಗೆ ಡಿಕ್ಕಿಯಾದ ಪರಿಣಾಮ, ಬಸ್ ನಲ್ಲಿದ್ದ 7 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಶಿರಾ ರಾಷ್ಟ್ರೀಯ ಹೆದ್ದಾರಿ-48 ಬಳಿಯ ಜೈಹಿಂದ್ ಹೋಟೆಲ್ ಬಳಿ ದುರಂತ ಸಂಭವಿಸಿದ್ದು, ಖಾಸಗಿ ಬಸ್ ಸಿಗಂದೂರಿನಿಂದ ಶಿರಾ ಕಡೆ ಪ್ರಯಾಣಿಸುತ್ತಿತ್ತು. ಅಪಘಾತ ಸಂಭವಿಸಿದ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲೇ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅನುಷ(07),ಸವಿತಾ(20),ರತ್ನಮ್ಮ(38),ಶಂಕರ(35),ಅಶ್ವತ್ತನಾರಾಯಣ(50) ಸೇರಿ ಇನ್ನಿಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.ಬಸ್ ನಲ್ಲಿದ್ದ ಉಳಿದ 20 ಪ್ರಯಾಣಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.ಇನ್ನು ಮೃತರೆಲ್ಲಾ ಶಿರಾ ಹಾಗೂ ಪಟ್ಟನಾಯಕನಹಳ್ಳಿ ನಿವಾಸಿಗಳಾಗಿದ್ದು, ಶಿರಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES