Top

ಫೈನಲ್​ಗಾಗಿ ಚೆನ್ನೈ-ಹೈದರಾಬಾದ್ ಕಾದಾಟ: ಪ್ಲೇಆಫ್​ನಲ್ಲಿ ಕೆಕೆಆರ್​-ರಾಯಲ್ಸ್

ಫೈನಲ್​ಗಾಗಿ ಚೆನ್ನೈ-ಹೈದರಾಬಾದ್ ಕಾದಾಟ: ಪ್ಲೇಆಫ್​ನಲ್ಲಿ ಕೆಕೆಆರ್​-ರಾಯಲ್ಸ್
X

ಲೀಗ್​ನಲ್ಲಿ ಅಗ್ರಸ್ಥಾನ ಪಡೆದ ಸನ್​ರೈಸರ್ಸ್ ಹೈದರಾಬಾದ್ ಮತ್ತು ಎರಡನೇ ಸ್ಥಾನ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-2018ರ ಫೈನಲ್​ಗಾಗಿ ಮಂಗಳವಾರ ಅಖಾಡಕ್ಕಿಳಿಯಲಿವೆ.

ಎರಡೂ ತಂಡಗಳು ಲೀಗ್​ನಲ್ಲಿ ಸಮಬಲದ ಹೋರಾಟ ಪ್ರದರ್ಶಿಸಿದ್ದರೂ ಚೆನ್ನೈ ಪರ ಅತ್ಯಂತ ಯಶಸ್ವಿ ನಾಯಕರಾದ ಧೋನಿ ಹಾಗೂ ಹೊಸ ನಾಯಕತ್ವದಲ್ಲಿ ಮಿಂಚುತ್ತಿದ್ದ ಹೈದರಾಬಾದ್ ನಡುವೆ ಇದು ಪ್ರತಿಷ್ಠೆಯ ವಿಷಯವಾಗಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತರೂ ಎಲಿಮಿನೇಟರ್ -2 ಪಂದ್ಯದಲ್ಲಿ ಗೆದ್ದು ಫೈನಲ್ ತಲುಪುವ ಮತ್ತೊಂದು ಅವಕಾಶ ಈ ತಂಡಗಳಿಗೆ ಲಭಿಸಲಿದೆ.

ಎಲಿಮಿನೇಟರ್ ಸುತ್ತಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಬುಧವಾರ ಸೆಣಸಲಿವೆ. ಚೆನ್ನೈ ವಿರುದ್ಧ ಪಂಜಾಬ್ ಸೋತಿದ್ದರಿಂದ ರಾಜಸ್ಥಾನ್​ಗೆ ಪ್ಲೇಆಫ್ ಅವಕಾಶದ ಅದೃಷ್ಟದ ಬಾಗಿಲು ತೆರೆಯಿತು.

Next Story

RELATED STORIES