Top

ರಾಜ್ಯಪಾಲರ ವಿರುದ್ಧ ಎಸ್ ಆರ್ ಹಿರೇಮಠ ವಾಗ್ಧಾಳಿ

ರಾಜ್ಯಪಾಲರ ವಿರುದ್ಧ ಎಸ್ ಆರ್ ಹಿರೇಮಠ ವಾಗ್ಧಾಳಿ
X

ಧಾರವಾಡ : ರಾಜ್ಯಪಾಲ ವಜುಬಾಯ್ ವಾಲಾ ಬಿಜೆಪಿ ಏಜೆಂಟ್ ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಾಚಿಕೆ, ಮಾನ, ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕೆಂದು ಎಸ್.ಆರ್.ಹಿರೇಮಠ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆಯ ನಂತರ ನೀಡಿರುವ ಆದೇಶಗಳು ಸ್ವಾಗತಾರ್ಹವಾಗಿದೆ ಎಂದರು. ಇನ್ನು ಇದೇ ವೇಳೆ ರಾಜ್ಯದ ಹದಿನಾರು ಭ್ರಷ್ಟ ಮಂತ್ರಿಗಳನ್ನು ಪ್ರಜ್ಞಾವಂತ ಮತದಾರರು ಸೋಲಿಸಿರುವುದು ಸ್ವಾಗತಾರ್ಹ. ಅಮಿತ್ ಷಾ ಮತ್ತು ಮೋದಿ ಆಟ ಕರ್ನಾಟಕದಲ್ಲಿ ನಡೆಯಲಿಲ್ಲ ಎಂದು ಹೇಳಿದರು.

ಇನ್ನೂ ಮೋದಿ ಪಕ್ಷವನ್ನು ನೋಡದೆ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕು. ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಅಲ್ಲದೆ ಕಪ್ಪುಹಣದ ವಿರುದ್ಧ ಯುದ್ಧ ಪ್ರಧಾನಿಗಳು ಸಾರುತ್ತಾರೆ. ಅದ್ರೆ ಅವರೇ ಸೋಮಶೇಖರ ರೆಡ್ಡಿ ಜೊತೆ ವ್ಯವಹಾರ ಮಾಡುತ್ತಾರೆ ಇದು ಸರಿಯಲ್ಲ ಎಂದರು.

ಇದೇ ವೇಳೆ ಮೋದಿ ಮತ್ತು ಅಮಿತ್ ಷಾ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಲ್ಲ ಕಡೆ ಸರ್ಕಾರ ರಚನೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ. ಬಿಜೆಪಿ ಮುಕ್ತ, ಆರ್ ಎಸ್ ಎಸ್ ಮುಕ್ತ ಕರ್ನಾಟಕ ಆದ್ರೆ ಒಳ್ಳೆಯದು. ರಾಜ್ಯದಲ್ಲಿ ಹೊಸ ಸರ್ಕಾರಕ್ಕೆ ಹಲವಾರು ಸವಾಲುಗಳಿವೆ. ಅಕ್ರಮ ಗಣಿಗಾರಿಕೆ ಯಿಂದಾದ ನಷ್ಟವನ್ನು ಬೊಕ್ಕಸಕ್ಕೆ ಮರಳಿ ತರುವಲ್ಲಿ ಹೆಚ್ಚಿನ ಒತ್ತು ಕೊಡಬೇಕು ಎಂದು ಸಮಾಜ ಪರಿವರ್ತನಾ ವೇದಿಕೆಯ ಮುಖಂಡ ಎಸ್ ಆರ್ ಹಿರೇಮಠ್ ಹೇಳಿದರು.

Next Story

RELATED STORIES